ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ,ಇವರ ಆಶ್ರಯದಲ್ಲಿ ನೃತ್ಯನಿಕೇತನ,ಉಡುಪಿ ಇವರು ಅರ್ಪಿಸುವ ನಾಟ್ಯ ಜಯಂತಿ ಮತ್ತು ನೃತ್ಯೋತ್ಸವ – 2019 ವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥಶ್ರೀಪಾದರು ಮತ್ತು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟಿಸಿದರು,ಈ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಬೆಕ್ಕೇರಿ,ನೃತ್ಯನಿಕೇತನದ ನಿರ್ದೇಶಕಿ ಲಕ್ಷ್ಮಿ ಗುರುರಾಜ್ ಕೊಡವೂರ್ ಮೊದಲಾದವರು ಉಪಸ್ಥಿತರಿದ್ದರು.