ಶ್ರೀ ಕೃಷ್ಣ ಮಠ: ಅನುಗ್ರಹ ಸಂದೇಶ   ಕಾರ್ಯಕ್ರಮ

ಉಡುಪಿ:  ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀಜಗದ್ಗುರು ಮೂಲಮಹಾಸಂಸ್ಥಾನಂ ಶ್ರೀಹೃಷಿಕೇಶತೀರ್ಥಪೀಠಮ್ ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಕಾರ್ಯಕ್ರಮಗಳ ಎಂಟನೇ ದಿನದಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ  ನೀಡಿದರು.

ಸಮಾರಂಭದಲ್ಲಿ  ನಾಡೋಜ ಡಾ.ಜಿ.ಶಂಕರ್, ಭುವನೇಂದ್ರ ಕಿದಿಯೂರು, ಆನಂದ ಸಿ.ಕುಂದರ್, ಹರಿಯಪ್ಪ ಕೋಟಿಯಾನ್, ವಿದ್ವಾನ್ ಮಧೂರು ಬಾಲಸುಬ್ರಮಣ್ಯ,  ಪ್ರತಿಭಾ ಸಾಮಗ, ಭೋಜರಾಜ ಕಿದಿಯೂರು, ಜಯಚಂದ್ರ ಐ.ಕೆ, ವಿಷ್ಣು ಆರ್. ಆಚಾರ್ಯ, ಲಕ್ಷ್ಮೀನಾರಾಯಣ ರಾವ್ ಬೈಲಕೆರೆ, ಗಣೇಶ್ ಹೆಬ್ಬಾರ್, ಶ್ರೀಕಾಂತ ಉಪಾಧ್ಯಾಯ, ವಿಷ್ಣುಪ್ರಸಾದ್ ಪಾಡಿಗಾರ್  ಇವರನ್ನು ಸನ್ಮಾನಿಸಲಾಯಿತು.