ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ರಾಜ್ಯ ಸಮಿತಿಯ ಕಾರ್ಯಕಾರಿಣಿ ಸಭೆಯು ಕೆ.ಪಿ.ಸಿ.ಸಿ ಕಛೇರಿ ರೇಸ್ ಕೋರ್ಸ್ ಬೆಂಗಳೂರು ಇಲ್ಲಿ ರಾಜ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಫಾರೂಕ್ ಚಂದ್ರನಗರ ಮಾತನಾಡಿ, ರಾಜ್ಯದಲ್ಲಿ ಮುಂಬರುವ ಚುನಾವಣೆ ಬಗ್ಗೆ ಚರ್ಚೆ ನಡೆಸಿದರು. ಈಗಾಗಲೇ ಪ್ರತಿ ಕುಟುಂಬಕ್ಕೂ ಮಾಸಿಕ ಕರೆಂಟ್ 200 ಯುನಿಟ್ ಉಚಿತವಾಗಿ ನೀಡುವುದು ಹಾಗೂ ಪ್ರತಿ ತಿಂಗಳು ಮನೆಯ ಹೆಣ್ಣು ಮಕ್ಕಳಿಗೆ ಸಂಸಾರ ನಡೆಸಲು 2000 ರೂಪಾಯಿ ನೀಡುವುದು, ಮಾಸಿಕ 10 ಕೆಜಿ ಅಕ್ಕಿ ನೀಡುವ ಬಗ್ಗೆ ಘೋಷಣೆ ಆರ್ಥಿಕವಾಗಿ ಬಲಗೊಳಿಸಲು ಸಾಧ್ಯವಾಗುತ್ತದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ, ಬಡವರ ದೀನದಲಿತರ ಪಕ್ಷ, ಜಾತ್ಯತೀತ ನೆಲೆಯಲ್ಲಿ ಪ್ರತಿಯೊಬ್ಬರ ನೋವಿಗೂ ಸ್ಪಂದಿಸಿ ರಾಜ್ಯವನ್ನು ನಡೆಸುವ ಪಕ್ಷ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಕಾಂಗ್ರೆಸ್ ಮುಖಂಡ ಇರ್ಷಾದ್ ಬೆಂಗಳೂರು, ಅಶ್ಫಾಕ್ ಬಾಗಲಕೋಟೆ, ಅಬ್ದುಲ್ ಸಮದ್ ಹಾಸನ, ಅಬ್ದುಲ್ಲ ಶಿವಳ್ಳಿ ಹಾಗೂ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.












