ಗೀತಾಂಜಲಿ ಸಿಲ್ಕ್ಸ್ ನಲ್ಲಿ ಕೋಟಿ ಕಂಠ ಗಾಯನ

ಉಡುಪಿ: ನಗರದ ಹೆಸರಾಂತ ವಸ್ತ್ರ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಮಳಿಗೆಯ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ಸದಸ್ಯರು ಕನ್ನಡ ಬಾವುಟಗಳನ್ನು ಹಿಡಿದು ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಂಡು ತಮ್ಮ ಕನ್ನಡಾಭಿಮಾನವನ್ನು ಮೆರೆದರು.