ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿರುವ ಕೋಟದ ಹುಡುಗನಿಗೆ ನೆರವಾಗಿ ಪ್ಲೀಸ್

ತನ್ನ ಮನೆಗೆ ಆಧಾರಸ್ತಂಭವಾಗಿದ್ದ ಕೋಟದ ಯುವಕನೋರ್ವ ಹೃದಯ ಖಾಯಿಲೆಯಿಂದ ಬಳಲುತ್ತಿದ್ದು  ಯುವಕನ ಚಿಕಿತ್ಸೆ ವೆಚ್ಚ ನೀಡಲಾಗದೇ ಕುಟುಂಬ ಕಂಗಾಲಾಗಿ ಕೂತಿದೆ.

ಹೌದು ಮೂಲತ ಕೋಟದ ಕಲ್ಮಾಡಿ ನಿವಾಸಿ, ಪ್ರಸ್ತುತ ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿ ವಾಸವಿರುವ ಸುಜಾತ ಗಾಣಿಗ ಹಾಗೂ ಆರ್. ಹರಿ ದಂಪತಿಯ ಮಗ 21 ವರ್ಷದ ಸುರದ್ರೂಪಿ ಮಗ ಸಚಿನ್ ಹೃದಯ ಖಾಯಿಲೆಗೆ ತುತ್ತಾಗಿದ್ದಾರೆ.

ಸಚಿನ್ ಅವರದ್ದು  ತೀರಾ ಬಡತನದ ಕುಟುಂಬ. ತಾಯಿ ಸುಜಾತ ಅವರು ಬಾಲ್ಯದಿಂದಲೂ ಮನೆಯ ಜವಬ್ದಾರಿಯನ್ನು ಹೊತ್ತು ಸುತ್ತಲಿನ ಮನೆಗಳಲ್ಲಿ ಮನೆಗೆಲಸ ಮಾಡಿ ತನ್ನೆರಡು ಮಕ್ಕಳನ್ನು ಸಾಕಿ ಸಲಹಿದ್ದರು. ಈಕೆಯ ಗಂಡ ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು. ಆರಂಭದಿಂದ ಇವರದ್ದು ಪುಟ್ಟ ಬಾಡಿಗೆ ಮನೆಯೊಂದರಲ್ಲಿ ವಾಸ. ಇಂತಹ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಮಗ ಸಚಿನ್  ಪಿಯುಸಿಗೆ ಶಿಕ್ಷಣ ತ್ಯಜಿಸಿ ಝೆರಾಕ್ಸ್ ಅಂಗಡಿ ಮುಂತಾದ ಕಡೆಗಳಲ್ಲಿ ಹಗಳಿರುಳು ದುಡಿದು ಮನೆಯ ಜವಬ್ದಾರಿಗೆ ಹೆಗಲುಕೊಟ್ಟಿದ್ದ. ಎರಡು ವರ್ಷದ ಹಿಂದೆ ಒಬ್ಬಳೇ ತಂಗಿಗೆ ಲಕ್ಷಾಂತರ ರೂ ವ್ಯಯಿಸಿ ಮದುವೆ ಮಾಡಿದ್ದು ಸಾಲದ ಜವಬ್ದಾರಿಯೂ ಈತನ ಮೇಲಿತ್ತು. ಜತೆಗೆ ಮನೆಯ ನಿರ್ವಹಣೆ, ತಂದೆ ತಾಯಿಯ ಪೋಷಣೆ ಮುಂತಾದ ಹೊಣೆಗಾರಿಕೆ ಇತ್ತು.

ಕಾಡಿದ ಹೃದಯ ಖಾಯಿಲೆ:

ಆರೋಗ್ಯವಾಗಿ ಲವ-ಲವಿಕೆಯಿಂದ ಇದ್ದ ಸಚಿನ್ ಗೆ ವಾರದ ಹಿಂದೆ ಇದ್ದಕ್ಕಿಂದಂತೆ ಸಣ್ಣಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಜ್ವರ ಉಲ್ಬಣಗೊಂಡು ವೈದ್ಯರ ಬಳಿ ತೋರಿದಾಗ ಗಂಭೀರ ಹೃದಯ ಸಂಬಂಧಿ ಸಮಸ್ಯೆ ಇದ್ದು ದೊಡ್ಡಸ್ಪತ್ರೆಗೆ ತೋರಿಸುವಂತೆ ತಿಳಿಸಿದ್ದರು. ಹೀಗಾಗಿ ಅವರಿವರ ಬಳಿ ಕಾಡಿ ಬೇಡಿ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದರು.

ಎಲ್ಲಾ ತಪಾಸಣೆಗಳನ್ನು ಮಾಡಿದ ವೈದ್ಯರು ಈತನಿಗೆ ವೈರಸ್ ಜ್ವರವೊಂದು ಕಾಡುತ್ತಿದ್ದು ಅದರಿಂದ ನೇರವಾಗಿ ಹೃದಯಕ್ಕೆ ಘಾಸಿಯಾಗಿದೆ ಮತ್ತು ಹೃದಯ ಕಾರ್ಯಚಟುವಟಿಕೆಯನ್ನು ಶೇ. 80ರಷ್ಟು ಸ್ಥಗಿತಗೊಳಿಸಿದೆ. ಜೀವಕ್ಕೆ ತುಂಬಾ ಅಪಾಯದ ಪರಿಸ್ಥಿತಿ ಎಂಬ ಎಂಬ ಅಘಾತಕಾರಿ ವಿಚಾರವನ್ನು ತಿಳಿಸಿದ್ದರು . ಬದುಕುಳಿಯಬೇಕಾದರೆ ಲಕ್ಷಾಂತರ ಹಣ ಖರ್ಚು ಮಾಡಬೇಕು. ಪ್ರತಿದಿನ ಸಾವಿರಾರು ರೂ ಕೈಯಲ್ಲಿರಬೇಕು ಎಂದಿದ್ದರು.

ಮನೆಗೆ ಆಧಾರವಾಗಿದ್ದ, ಸಮಸ್ಯೆಗಳಿಗೆಲ್ಲ ತಾನೇ ಹೆಗಲು ಕೊಡುತ್ತಿದ್ದ ಮಗ ಆಸ್ಪತ್ರೆಯ ಐ.ಸಿ.ಯೂ.ನಲ್ಲಿ ಮಲಗಿರುವುದನ್ನು ಕಂಡ ಬಡ ಕುಟುಂಬ  ತತ್ತರಿಸಿ,ನಲುಗಿ ಹೋಗಿತ್ತು. ಮುಂದೆ ಏನು ಮಾಡಬೇಕು ಎನ್ನುವುದೇ ತಿಳಿಯದೆ ದಿಕ್ಕು ತೋಚದಂತಾಗಿತ್ತು. ಏನಾದರು ಮಾಡಿ ಮಗನನ್ನು ಉಳಿಸಿಕೊಳ್ಳಬೇಕು ಎನ್ನುವ ಹಟಕ್ಕೆ ಬಿದ್ದು ಇದ್ದ ಚಿನ್ನ ಮುಂತಾದ ಸಿಕ್ಕ-ಸಿಕ್ಕ ವಸ್ತುಗಳನ್ನು ಬಳಸಿಕೊಂಡು, ಪರಿಚಯಸ್ಥರ ಬಳಿ ಗೋಗರೆದು ಒಂದಷ್ಟು ಸಾಲಮಾಡಿ ಹಣವನ್ನು ಹೊಂದಿಸಿ ಚಿಕಿತ್ಸೆ ಆರಂಭಿಸಿದರು. ಇದೀಗ ಚಿಕಿತ್ಸೆ ನಡೆಯುತ್ತಿದ್ದು ಸಂಪೂರ್ಣ ಯಂತ್ರದ ಸಹಾಯದಿಂದ ಹೃದಯ ಕಾರ್ಯನಿರ್ವಹಿಸುತ್ತಿದೆ. ಚಿಕಿತ್ಸೆಗೆ ಸಚಿನ್ ಸ್ವಲ್ಪ-ಸ್ವಲ್ಪವೇ ಸ್ಪಂದಿಸುತ್ತಿದ್ದಾನೆ.

ಬೇಕಿದೆ ನಿಮ್ಮ ನೆರವು:
ಆಸ್ಪತ್ರೆಯ ಖರ್ಚು-ವೆಚ್ಚಗಳಿಗೆ ಮುಂದೆ 14ಲಕ್ಷರೂಗಿಂತ ಹೆಚ್ಚಿನ ಹಣ ಬೇಕು ಎಂದು ವೈದ್ಯರು ಅಂದಾಜು ಪಟ್ಟಿಯನ್ನು ಕೈಗಿಟ್ಟಿದ್ದಾರೆ.

ಕುಟುಂಬದ ದುರಾದೃಷ್ಟವೋ ಎನೋ ಸ್ವಲ್ಪ ವರ್ಷದ ಹಿಂದೆ ಪಡಿತರ ಚೀಟಿ ಮಾಡುವ ಸಂದರ್ಭ ಸಚಿನ್ ಯಾವುದೋ ಕೆಲಸದ ಮೇಲೆ ಹೋಗಿದ್ದರಿಂದ ಆತನನ್ನು ಬಿಟ್ಟು ಕಾರ್ಡ್ ಮಾಡಿಸಲಾಗಿತ್ತು. ಹೀಗಾಗಿ ಇದೀಗ ಸರಕಾರದ ಯಾವುದೇ ಸಹಾಯಧನಕ್ಕೆ ಈತ ಅರ್ಹನಾಗಿಲ್ಲ.

ಅಪ್ಪ-ಅಮ್ಮ ಕೈಯಲ್ಲಿ ಸಾಧ್ಯವಾದ್ದಕ್ಕಿಂತ ಹೆಚ್ಚು ಹಣವನ್ನು ಈಗಾಗಲೇ ಸಂಗ್ರಹಿಸಿದ್ದಾರೆ. ಆದರೆ ನೀಡಿರುವ ಅಂದಾಜು ವೆಚ್ಚದ ಅರ್ಧಮೊತ್ತವನ್ನುಅದು ತಲುಪುತ್ತಿಲ್ಲ. ಹೀಗಾಗಿ ಮುಂದೇನು ಎನ್ನುವ ಚಿಂತೆ ಇವರನ್ನು ಕಾಡುತ್ತಿದೆ, ದಾನಿಗಳ ಸಹಕಾರವೊಂದೇ ದಿಕ್ಕು ಎನ್ನುವಂತಾಗಿದೆ. ಉಳಿದ ಹಣವನ್ನು ಆದಷ್ಟು ಶೀಘ್ರ ಜಮಾ ಮಾಡುವಂತೆ ಆಸ್ಪತ್ರೆಯವರು ಹೇಳುತ್ತಿದ್ದು ದಿನೇ-ದಿನೇ ಚಿಂತೆ ಹೆಚ್ಚುವಂತೆ ಮಾಡಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇವರಿಗೆ ಸಹಕಾರ ಅಗತ್ಯವಿದೆ.
ಸಹಕಾರ ನೀಡುವವರು ಈ ವಿಳಾಸಕ್ಕೆ ಜಮಾ ಮಾಡಬಹುದು.
ಖಾತೆದಾರರ ಹೆಸರು:- ಸುಜಾತ,
ಖಾತೆ : ಕರ್ಣಾಟಕ ಬ್ಯಾಂಕ್ ಕೋಟ ಶಾಖೆ.
ಖಾತೆ ಸಂಖ್ಯೆ:- 4122500101046301,
ಐ.ಎಫ್.ಎಸ್. ಸಂಖ್ಯೆ:- KARB0000412.
Mobile: sujatha, 7795401690