ಕೋಟ: ಇಸ್ಪೀಟು ಜುಗಾರಿ ಅಡ್ಡೆಗೆ ಪೊಲೀಸರ ದಾಳಿ- 7 ಮಂದಿ ವಶಕ್ಕೆ

ಉಡುಪಿ : ಬ್ರಹ್ಮಾವರ ತಾಲೂಕು ಬಿಲ್ಲಾಡಿ ಗ್ರಾಮದ ಮೆತ್ತಗೊಳಿ ಎಂಬಲ್ಲಿಯ ಕೋಳಿ ಶೆಡ್ ಬಳಿ ಅಂದರ್‌ ಬಾಹ‌ರ್ ಇಸ್ಪೀಟು ಆಟದ ಅಡ್ಡೆಗೆ ಪೊಲೀಸರು ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಜಯಕರ ಪೂಜಾರಿ(42), ಚಕ್ರಪಾಣಿ(60), ನಿಲೇಶ್ ಕೋಠಾರಿ(43),ಜಗದೀಶ ಆಚಾರ್ಯ(45), ಗೋಪಾಲ, ಸದಾಶಿವ ಶಾಸ್ತ್ರಿ, ಕಾಳಪ್ಪ ನಾಯ್ಕ(59) ಬಂಧಿತರು. ಬಂಧಿತರಿಂದ ಇಸ್ಪೀಟು ಜುಗಾರಿ ಆಟಕ್ಕೆ ಬಳಸಿದ ರೂ. 9,880 ನಗದು, 8 ಮೊಬೈಲ್‌ ಹ್ಯಾಂಡ್ ಸೆಟ್, ಒಂದು ಕಾರು,ಸ್ಕೂಟರ್ ಸಹಿತ ಸುತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.