ಉಡುಪಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಕೋಟ ಮೂರ್ತೆದಾರರ ಸಹಕಾರಿ ಸಂಘಕ್ಕೆ ಅತ್ಯುತ್ತಮ ಸಹಕಾರಿ ಸಂಘ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಇವರು ಸಂಘದ ಅಧ್ಯಕ್ಷ ಕೊರಗ ಪೂಜಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕೆಮ್ಮಣ್ಣು ಇವರಿಗೆ ಸೆ.7ರಂದು ಬ್ಯಾಂಕಿನ ಸಭಾಂಗಣದಲ್ಲಿ ನೀಡಿ ಗೌರವಿಸಿದರು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಎಸ್ಸಿಡಿಸಿಸಿ ಬ್ಯಾಂಕ್ನ ನಿರ್ದೇಶಕರಾದ ದೇವಿಪ್ರಸಾದ ಶೆಟ್ಟಿ , ಮೂರ್ತೆದಾರ ಮಹಾಮಂಡಲ ನಿರ್ದೇಶಕರಾದ ಎಚ್. ನರಸಿಂಹ ಪೂಜಾರಿ, ಅಚ್ಯುತ ಕೋಟ್ಯಾನ್, ಸತೀಶ್ ಪೂಜಾರಿ, ಬ್ರಹ್ಮಾವರ ಮೂರ್ತೆದಾರ ಸಹಕಾರಿ ಸಂಘ ಅಧ್ಯಕ್ಷ ಶಂಕರ ಪೂಜಾರಿ ಉಪಸ್ಥಿತರಿದ್ದರು.












