ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಕಾರ್ಯಕ್ರಮ ಫೆ.19 ರಂದು ಜರಗಿತು . ಈ ಪ್ರಯುಕ್ತ 11:56 ಕ್ಕೆ ರಥಾರೋಹಣ , ಸಂಜೆ ರಥಾವರೋಹಣ, ರಾಜಮಾರ್ಗದಲ್ಲಿ ಮೆರವಣಿಗೆ ನಡೆಯಿತು . ಹಿರೇಮಹಾಲಿಂಗೇಶ್ವರ ಮಿತ್ರ ವೃಂದ ಕೋಟ ಇದರ ಸದಸ್ಯರ ಆಶ್ರಯದಲ್ಲಿ ಕೀಲು ಕುದುರೆ , ಡೊಳ್ಳು ಕುಣಿತ, ಚಂಡೆ ವಾದನ, ಬ್ಯಾಂಡ್ ಸೆಟ್ , ಬೆಂಗಳೂರು ಮಿತ್ರರಿಂದ ಸುಡು ಮದ್ದು ಪ್ರದರ್ಶನ ಬಹಳ ವಿಜೃಂಭಣೆಯಿಂದ ನಡೆಯಿತು .