ಉಡುಪಿ: ಕೊಪ್ಪದಿಂದ ಆಗುಂಬೆ ಮಾರ್ಗವಾಗಿ ಉಡುಪಿಯತ್ತ ಸಾಗುತ್ತಿದ್ದ ಖಾಸಗಿ ಬಸ್ಸೊಂದು ಸೋಮೇಶ್ವರದಲ್ಲಿ ಹೊಂಡಕ್ಕೆ ಉರುಳಿಬಿದ್ದ ಘಟನೆ ಆಗುಂಬೆ-ಸೋಮೇಶ್ವರ ಮಾರ್ಗದಲ್ಲಿ ಗುರುವಾರ ಸಂಭವಿಸಿದೆ.
ಪಿಕ್ ಅಪ್ ವಾಹನವೊಂದು ಕಾರನ್ನು ಓವರ್ ಟೇಕ್ ಮಾಡುವ ಭರದಲ್ಲಿತ್ತು.ಆಗ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ಸು, ನಿಯಂತ್ರಿಸಲು ಹೋಗಿ ಹೊಂಡಕ್ಕೆ ಉರುಳಿಬಿದ್ದಿದೆ. ಪಿಕ್ ಅಪ್ ವಾಹನದ ಚಾಲಕ ವೇಗವಾಗಿ, ನಿರ್ಲಕ್ಷದಿಂದ ಬಂದ ಪರಿಣಾಮವೇ ಬಸ್ಸು ಉರುಳಿಬೀಳುವಂತಾಯಿತು. ಖಾಸಗಿ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.













