ಕೊಪ್ಪ: ಕೆ.ಬಿ ಸದಾಶಿವ ಬಂಗೇರ ಇವರು ಅಂಚೆ ನೌಕರರಾಗಿ 42 ವರ್ಷ ಕೊಪ್ಪ ಪ್ರಧಾನ ಅಂಚೆ ಕಚೇರಿಯಲ್ಲಿ ಸೇವೆ ಸಲ್ಲಿಸಿ, ಜುಲೈ 30 ರಂದು ನಿವೃತ್ತಿ ಹೊಂದಿದ್ದು, ಈ ಸಂದರ್ಭ ಅವರನ್ನು ಕೊಪ್ಪ ಪ್ರಧಾನ ಅಂಚೆ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಂಚೆ ಕಚೇರಿಯ ಪಾಲಕರಾದ ಶ್ರೀಮತಿ ಸುಮನ, ಅನುರಾಧಾ, ಅಕೌಂಟೆಂಟ್ ವಾಸುದೇವ ಹಾಗೂ ದಿನೇಶ್, ಪಣಿಕುಮಾರ್ ಹಾಗೂ ಅಂಚೆ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸದಾಶಿವ ಬಂಗೇರರವರ ಪತ್ನಿ ಮಲ್ಲಿಕಾ, ಮಕ್ಕಳಾದ ಸ್ವರೂಪ್, ಸ್ವಾತಿ, ಪೂರ್ಣಿಮಾ, ಮೊಮ್ಮಗು ರಾಶ್ವಿ ಕಾರ್ಯಕ್ರಮದಲ್ಲಿ ಭಾಗಿಯಾದರು.