ಕೊಂಕಣಿ ಲೇಖಕ ಸಂಘದಿಂದ ಶ್ರೀಮತಿ ಐರಿನ್ ಪಿಂಟೋರವರಿಗೆ ಪ್ರಶಸ್ತಿ ಪ್ರದಾನ

ಮಂಗಳೂರು: ಖ್ಯಾತ ಲೇಖಕಿ ಶ್ರೀಮತಿ ಐರಿನ್ ಪಿಂಟೋ ಇವರಿಗೆ ಕೊಂಕಣಿ ಲೇಖಕ ಸಂಘವು ಕೊಂಕಣಿ ಸಾಹಿತ್ಯ ಪ್ರಶಸ್ತಿ 2023 ನೀಡಿ ಗೌರವಿಸಿದೆ. ಫೆ. 25 ರಂದು ನಂತೂರಿನ ಬಜ್ಜೋಡಿ ಸಂದೇಶ ಪ್ರತಿಷ್ಠಾನದ ಸಂದೇಶ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು. ಮುಖ್ಯ ಅತಿಥಿಯಾಗಿ ರಾಕ್ಣೋ ವಾರಪತ್ರಿಕೆಯ ಮಾಜಿ ಸಂಪಾದಕ ರೆ.ಫ್ರಾನ್ಸಿಸ್ ರೊಡ್ರಿಗಸ್ ಹಾಗೂ ಗೌರವ ಅತಿಥಿಯಾಗಿ ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ರಾಧಾಕೃಷ್ಣ ಬೆಳ್ಳೂರು ಭಾಗವಹಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀಮತಿ ಐರಿನ್ ಪಿಂಟೋ, ಕೊಂಕಣಿ ಲೇಖಕಿ, ಕಾದಂಬರಿಕಾರ್ತಿ ಎಂದು ಗುರುತಿಸಿದ್ದಕ್ಕಾಗಿ ಕೊಂಕಣಿ ಸಾಹಿತ್ಯ ಲೋಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಕೊಂಕಣಿ ಸಮುದಾಯದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಕೆ.ಎಲ್.ಎಸ್ ನಿಂದ ಪ್ರಶಸ್ತಿ ಸ್ವೀಕರಿಸಿರುವುದು ಅಪಾರ ಸಂತಸ ತಂದಿದೆ. ಇದಕ್ಕಾಗಿ ಬೆಂಬಲಿಗರಿಗೆ, ಸಾಹಿತ್ಯಾಭಿಮಾನಿಗಳಿಗೆ ಮತ್ತು ಕುಟುಂಬದ ಸಸ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೆ.ಎಸ್.ಎಲ್ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಹೊಂದಲಿ ಎಂದು ಹಾರೈಸಿದರು.

ಪ್ರಶಸ್ತಿಯು 25 ಸಾವಿರ ರೂ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಡಾ. ಎಡ್ವರ್ಡ್ ನಜ್ರೆತ್, ಎರಿಕ್ ರೋಜಾರಿಯೋ, ಆಂಡ್ರ್ಯೂ ಎಲ್ ಡಿಕುನ್ಹಾ, ಶ್ರೀಮತಿ ಜಾಯ್ಸ್ ಒಝೇರಿಯೋ ಮತ್ತು ವಲ್ಲಿ ಕ್ವಾಡ್ರಸ್ ಅವರನ್ನು ಸನ್ಮಾನಿಸಲಾಯಿತು. ರಾಕ್ಣೋ ಪತ್ರಿಕೆಯ ಮಾಜಿ ಸಂಪಾದಕ ರೆ. ಮಾರ್ಕ್ ವಾಲ್ಟರ್ ಬರೆದಿರುವ ತುಳು ಆವೃತ್ತಿಯ ‘ಭಗವಾನ್ ಯೇಸು ಕ್ರಿಸ್ತ’ ಪುಸ್ತಕ ಬಿಡುಗಡೆಗೊಳಿಸಲಾಯಿತು.

ಎಡ್ವರ್ಡ್ ನಜ್ರೆತ್ ಲೇಖಕಿಯ ಕೃತಿ ಪರಿಚಯ ನೀಡಿದರು.ರಿಚರ್ಡ್ ಮೊರಾಸ್ ಪ್ರಾಸ್ತಾವಿಸಿದರು. ಮಾಚ್ಚಾ ಮಿಲಾರ್ ವಂದಿಸಿದರು. ಅನಿಲ್ ಹಾಗೂ ಶ್ರೀಮತಿ ಐರಿನ್ ರೆಬೆಲ್ಲೋ ಪ್ರಾರ್ಥಿಸಿದರು. ಶ್ರೀಮತಿ ಲವಿ ಗಂಜಿಮಠ ನಿರೂಪಿಸಿದರು.