ಕೊಂಡಾಡಿ: ಮಾ.30 ರಿಂದ ಎ.10ರ ವರೆಗೆ 48ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ

ಹಿರಿಯಡಕ: ಕೊಂಡಾಡಿ ಶ್ರೀರಾಮ ಭಜನಾ ಮಂಡಳಿ ಇದರ 48 ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ ಕಾರ್ಯಕ್ರಮವು ಮಾ.30 ರಿಂದ ಎ.10 ರ ವರೆಗೆ ಭಜನೆ ಕಟ್ಟೆಯ ಶ್ರೀ ಅಶ್ವಥನಾರಾಯಣ ಸನ್ನಿಧಿಯಲ್ಲಿ ನಡೆಯಲಿದೆ.

ಮಾ.30 ರಿಂದ ನಿತ್ಯ ಭಜನೆ ಪ್ರಾರಂಭವಾಗಲಿದ್ದು, ಏ.10 ಆದಿತ್ಯವಾರದಂದು ಸೂರ್ಯೋದಯದಿಂದ ಏಕಾಹ ಭಜನೆ ಪ್ರಾರಂಭವಾಗಲಿದೆ.

ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, 12:30 ರಿಂದ ಅನ್ನಸಂತರ್ಪಣೆ ನಡೆಯಲಿದೆ.

ಎ.11 ಸೋಮವಾರ, ಸೂರ್ಯೋದಯಕ್ಕೆ ಭಜನಾ ಮಂಗಲೋತ್ಸವ ನಡೆಯಲಿದ್ದು, ಸಂಜೆ 7 ಗಂಟೆಗೆ ಮರುಭಜನೆ ನಡೆದಿದೆ.