ಕೊಲ್ಲೂರು: ಸ್ಯಾಂಡಲ್ವುಡ್ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿದರು.
ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಬಳಿಕ ರಚಿತಾ ರಾಮ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ನೀಡಿದರು. ಶ್ರೀ ಮೂಕಾಂಬಿಕೆ ದೇವರಿಗೆ ವಿಶೇಷ ಸೇವೆ ಸಲ್ಲಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ ರಚಿತಾ ರಾಮ್ ಅವರಿಗೆ ಫಲ-ಪ್ರಸಾದಗಳನ್ನು ನೀಡಿ ಗೌರವ ಸಲ್ಲಿಸಿದರು.
ರಚಿತಾ ರಾಮ್ ಅವರು ದೇವಿ ಗರ್ಭಗುಡಿಯ ಮುಂದೆ ಕೆಲಕಾಲ ನಿಂತು ‘ನನ್ನ ಮನಸ್ಸಿನ ಇಚ್ಛೆ ಪೂರೈಸಮ್ಮಾ ಕೊಲ್ಲೂರಮ್ಮಾ’ ಅಂತ ಕೋರಿಕೊಂಡಿದ್ದಾರೆ. ನಿಮ್ಮ ಆಕಾಂಕ್ಷೆ ಈಡೇರಲಿ ಎಂದು ಕೊಲ್ಲೂರಿನ ಅರ್ಚಕರು ಪ್ರಸಾದ ಕೊಟ್ಟಿದ್ದಾರೆ.