ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ: ಭಕ್ತರಿಂದ ದಾಖಲೆಯ ಕಾಣಿಕೆ ಹಣ ಸಂಗ್ರಹ.

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ಹುಂಡಿಯಲ್ಲಿ ನ. 23ರಿಂದ ಡಿ. 29ರ ವರೆಗೆ ಭಕ್ತರಿಂದ 1,64,45,384 ರೂ. ಕಾಣಿಕೆ ಹಣ ಸಂಗ್ರಹವಾಗಿದೆ. ಇದು ಕೇವಲ 1 ತಿಂಗಳೊಳಗೆ ದಾಖಲೆಯ ಮೊತ್ತ ಸಂಗ್ರಹವಾಗಿದೆ. ಇದರಲ್ಲಿ 695 ಗ್ರಾಂ. ಚಿನ್ನ, 2.985 ಗ್ರಾಂ. ಬೆಳ್ಳಿ ಸೇರಿದೆ. ಕಳೆದ ವರ್ಷ 95,73,836 ರೂ. ಕಾಣಿಕೆ ರೂಪದಲ್ಲಿ ಸಂಗ್ರಹವಾಗಿತ್ತು.