ಕೊಡೇರಿ ನಾಡದೋಣಿ ದುರಂತ: ನಾಲ್ವರು ಮೀನುಗಾರರ ಮೃತದೇಹ ಪತ್ತೆ

ಬೈಂದೂರು: ಇಲ್ಲಿನ ಕೊಡೇರಿ ಸಮುದ್ರತೀರದಲ್ಲಿ ಭಾನುವಾರ ಸಂಭವಿಸಿದ್ದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರ ಮೃತದೇಹ ಇಂದು ಪತ್ತೆಯಾಗಿದೆ.
ಹೊಸಹಿತ್ಲು ಬಳಿ ನಾಗರಾಜ ಖಾರ್ವಿ (55), ಕೊಡೇರಿಯಿಂದ 5 ಕಿ.ಮೀ ದೂರದ ಆದರಗೋಳಿ ಸಮೀಪ ಲಕ್ಷ್ಮಣ ಖಾರ್ವಿ (34), ಶೇಖರ್ ಖಾರ್ವಿ ಶವ (39) ಹಾಗೂ ಮಂಜುನಾಥ ಖಾರ್ವಿ(40) ಶವ ಪತ್ತೆಯಾಗಿದೆ.
ನಿನ್ನೆ ಶ್ರೀ ಸಾಗರ್ ಹೆಸರಿನ ನಾಡದೋಣಿ ಅಲೆಗಳ ಉಬ್ಬರಕ್ಕೆ ಸಿಲುಕಿ ಬಂಡೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿತ್ತು. ಇದರ ಪರಿಣಾಮ ದೋಣಿಯಲ್ಲಿದ್ದ 12 ಮೀನುಗಾರರ ಪೈಕಿ 8 ಮಂದಿಯನ್ನು ರಕ್ಷಣೆ ಮಾಡಲಾಗಿತ್ತು.