ಕೊಡವೂರು: ಮನೆಮನೆಗೆ ಲಸಿಕೆ ಅಭಿಯಾನ

ಕೊಡವೂರು: ಕೊಡವೂರು ವಾರ್ಡಿನ ಸಂಘ-ಸಂಸ್ಥೆಗಳ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದ, ಅಂಗವಿಕಲ ದುರ್ಬಲರ ಮನೆಗೆ ಹೋಗಿ ಲಸಿಕೆ ಪಡೆಯುವಂತೆ ಅಭಿಯಾನವನ್ನು ಕೈಗೊಂಡಿದ್ದಾರೆ.

ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ಅವರು, ಯಾರಿಗೆ ಲಸಿಕಾ ಕೇಂದ್ರಕ್ಕೆ ಬರಲು ಸಾಧ್ಯವಿಲ್ಲ. ಅಂಗವಿಕಲರು, ದುರ್ಬಲವಾಗಿರುವ ಜನರನ್ನು ಗುರುತಿಸಿ ಅವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಯಿತು. ಶೇ. 100ರಷ್ಟು ಕೋವಿಡ್ ಲಸಿಕಾ ಮುಕ್ತ ವಾರ್ಡ್ ಆಗಿ ಮಾಡುವ ಸಲುವಾಗಿ ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಯಿತು.

ಪ್ರೈಮರಿ ಹೆಲ್ತ್ ಸೆಂಟರ್ ಮಲ್ಪೆಯ ವೈದ್ಯಕೀಯ ತಂಡ, ಆಶಾ ಕಾರ್ಯಕರ್ತೆಯರು, ನರ್ಸ್ ಇವರ ಸಹಯೋಗದೊಂದಿಗೆ ಅಭಿಯಾನ ಕಾರ್ಯ ನಡೆಯಿತು. ಕೇವಲ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮನೆ ಮನೆಗೆ ಬಂದು ಮತ ಕೊಡಿ ಎಂದು ಕೇಳುತ್ತಾರೆ. ಆದರೆ ಕೊಡವೂರು ವಾರ್ಡಿನ ಕಾರ್ಯಕರ್ತರು ಈ ರೀತಿ ಅಲ್ಲ ಕೊರೊಣದಂತಹ ಭೀಕರ ಕಷ್ಟಕಾಲದಲ್ಲೂ ವ್ಯಾಕ್ಸಿನೇಷನ್ ಪಡೆಯಲು ಸಂಸ್ಥೆಯ ಸಹಯೋಗದೊಂದಿಗೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದಾರೆ. ಈ ಬಾರಿ ಯಾರೆಲ್ಲ ಲಸಿಕೆ ಪಡೆದಿಲ್ಲ ಅವರ ಮನೆಗೆ ಹೋಗಿ ಲಸಿಕೆ ಕೊಡುವ ಕಾರ್ಯ ನಡೆಯುತ್ತಿದೆ ಎಂದು ಎಲ್ಲಾ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದರು.

ಅದೇ ರೀತಿ ಈ ಕಾರ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು, ಶ್ರೀದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರ ಕಾನಂಗಿಯ ಸರ್ವ ಸದಸ್ಯರು, ಸ್ನೇಹಿತ ಯುವ ಸಂಘ ಕೊಡವೂರು. ಯುವಕ ಸಂಘ ಕೊಪ್ಪಲ್ ತೋಟ ಉದ್ದಿನ ಹಿಟ್ಲು ಫ್ರೆಂಡ್ಸ್ , ವೈಷ್ಣವಿ ಲೇಔಟ್, ವಾಸುಕಿ ನಗರದ ಮಹಾ ಲಕ್ಷ್ಮೀ ಮಹಿಳಾ ಸಂಘ ಅದೇ ರೀತಿ ಅನೇಕ ಸಂಘ ಸಂಸ್ಥೆಯ ನೇತೃತ್ವದಲ್ಲಿ ನಡೆಯಿತು.

ಎಲ್ಲರಿಗೂ ಲಸಿಕೆ ಸಿಗಬೇಕು ಮತ್ತು ಶೇ. 100ರಷ್ಟು ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಅಭಿಯಾನ ಆಯೋಜಿಸಲಾಗಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯ ಸಮಿತಿಯ ಅಧ್ಯಕ್ಷಪ್ರಭಾತ್ ಕೊಡವೂರು ಹೇಳಿದರು