ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಂದು ಬೆಳಿಗ್ಗೆ 11 ಗಂಟೆಗೆ ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ಉಡುಪಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಕ್ಕಳು, ವೀರ ಪುರುಷರ ಜೀವನ ಚರಿತ್ರೆಯನ್ನು ಓದಿ ಅಧ್ಯಯನ ಮಾಡಬೇಕು ಹಾಗೂ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕು ಎಂಬ ಉದ್ದೇಶದಿಂದ ನಗರಸಭಾ ಸದಸ್ಯ ಕೆ. ವಿಜಯ ಕೊಡವೂರು ಹಾಗೂ ಪ್ರಭಾತ್ ಕೊಡವೂರು ಅವರ ನೇತೃತ್ವದಲ್ಲಿ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಕಿರಿಯರು ವಿಭಾಗ: 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಅಥವಾ ಚಂದ್ರಶೇಖರ್ ಅಜಾದ್ ಅವರ ವಿಷಯದಲ್ಲಿ ಭಾಷಣ ಮಾಡಬಹುದು. ಬಹುಮಾನ: ಪ್ರಥಮ- ₹3 ಸಾವಿರ ನಗದು, ದ್ವಿತೀಯ- ₹1ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರ.
ಹಿರಿಯರ ವಿಭಾಗ: ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ (22 ವರ್ಷದೊಳಗಿನ ಉದ್ಯೋಗಿ) ವೀರ ಸಾವರ್ಕರ್ ಮತ್ತು ಡಾ. ಹೆಡ್ಗೆವಾರ್ ಅವರ ವಿಷಯದಲ್ಲಿ ಭಾಷಣ ಮಾಡಬಹುದು. ಬಹುಮಾನ: ಪ್ರಥಮ-₹4 ಸಾವಿರ ನಗದು, ದ್ವಿತೀಯ ₹2 ಸಾವಿರ ನಗದು ಬಹುಮಾನ ಹಾಗೂ ಪ್ರಮಾಣಪತ್ರ ನೀಡಲಾಗುವುದು.
ನಿಬಂಧನೆಗಳು:
3 ರಿಂದ 4 ನಿಮಿಷ ಮೀರದಂತೆ ಕನ್ನಡ ಭಾಷೆಯಲ್ಲಿ ಭಾಷಣಕ್ಕೆ ಅವಕಾಶ.
ಸ್ಪರ್ಧೆಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡ್ ಅಥವಾ ವಿದ್ಯಾರ್ಥಿ ಗುರುತಿನ ಚೀಟಿಯೊಂದಿಗೆ ನೋಂದಣಿ ಮಾಡಬೇಕು.
ಆ.13ರೊಳಗೆ ಕರೆ ಮಾಡಿ ನೊಂದಾಯಿಸುವ 50 ಮಂದಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ.
ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗೆ ಅಶೋಕ್ ಶೆಟ್ಟಿಗಾರ್ ಮೊಬೈಲ್ ಸಂಖ್ಯೆ 77605 76527 ಅಥವಾ ಉಮೇಶ್ ಮೊ.ನಂ. 99648 97969 ಸಂಪರ್ಕಿಸಬಹುದು ಎಂದು ಕಾರ್ಯಕ್ರಮದ ಸಂಚಾಲಕರಾದ ಅಶೋಕ್ ಶೆಟ್ಟಿಗಾರ್ ಹಾಗೂ ಉಮೇಶ್ ತಿಳಿಸಿದ್ದಾರೆ.