ಕೊಡವೂರು: ಜನರ ಸಮಸ್ಯೆ ಅರಿತುಕೊಂಡು ಅವರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ದೊರಕಿಸಿಕೊಡಬೇಕು. ಆ ನಿಟ್ಟಿನಲ್ಲಿ ಕೊಡವೂಡು ವಾರ್ಡ್ ಮಾದರಿಯಾಗಿದೆ. ಹಾಗೆ, ದಾನಿಗಳಿಂದ ಹಣ ಸಂಗ್ರಹಿಸಿ ಅನೇಕರ ಕಷ್ಟಕ್ಕೆ ಸ್ಪಂದಿಸುವ ಸಂಘ-ಸಂಸ್ಥೆಗಳು ನಮ್ಮ ಕೊಡುವೂರು ವಾರ್ಡಿನಲ್ಲಿ ಇರುವುದು ಹೆಮ್ಮೆಯ ವಿಚಾರ ಎಂದು ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ ಕೊಡವೂರು ತಿಳಿಸಿದರು.
ಕೊಡವೂರಿನಲ್ಲಿ ನಿರ್ಮಾಣ ಆಗಲಿರುವ ಶಿವಾಜಿ ಪಾರ್ಕ್ ಗೆ ತಗಡು ಚಪ್ಪರ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಕೊಡವೂರಿನಲ್ಲಿ 28 ಸಂಘ ಸಂಸ್ಥೆಗಳಿವೆ. ಅವುಗಳು ನಾಗರಿಕರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿದೆ ಎಂದರು.
ಶಾಸಕ ರಘುಪತಿ ಭಟ್ ಅವರ ಶಾಸಕರ ನಿಧಿಯಿಂದ ಪಾರ್ಕ್ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಹಿರಿಯರಾದ ತಾರಾನಾಥ್ ಶೆಟ್ಟಿ, ರಂಗಯ್ಯ ಪುತ್ತೂರು, ಶಿವಾಜಿ ಪಾರ್ಕ್ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಮೋಹನ್ ಸುವರ್ಣ,ಶಶಿಕಲಾ,ಗೆಳೆಯರ ಬಳಗ ಲಕ್ಷ್ಮೀ ನಗರ ಅಧ್ಯಕ್ಷರಾದ ರಮೇಶ್ ಉಪಸ್ಥಿತರಿದ್ದರು.












