ಕೊಡವೂರು: ಸೆಲ್ಯೂಟ್ ತಿರಂಗಾ ದೇಶಭಕ್ತಿ ಸಂಘಟನೆಗೆ ಚಾಲನೆ

ಉಡುಪಿ: ಜಿಲ್ಲೆಯಲ್ಲಿ ಸೆಲ್ಯೂಟ್ ತಿರಂಗಾ ದೇಶ ಭಕ್ತಿಯಾಗಿರುವಂತಹ ಸಂಘಟನೆ. ಈ ಸಂಘಟನೆಯ ಮುಖಾಂತರ ಈ ಭಾಗದ ಅನೇಕ ಜನರನ್ನು ದೇಶದ ಸೇವೆಗೆ ( ಭಾರತೀಯ ಸೇನೆಗೆ) ಸೇರಿಸಿವಂತಹ ಪ್ರಯತ್ನ ಮಾಡಬೇಕು ಎನ್ನುವ ದೃಷ್ಟಿಯಿಂದ ದೀನ ದಲಿತರ, ಅಂಗವಿಕಲರ ಸರಕಾರದಿಂದ ಸಿಗುವ ಸವಲತ್ತು ಮತ್ತು ದಾನಿಗಳ ನೆರವಿನಿಂದ ಕೊಡಿಸಬೇಕು ಉದ್ದೇಶದೊಂದಿಗೆ ಸೆಲ್ಯೂಟ್ ತಿರಂಗಾ ದೇಶ ಭಕ್ತಿ ಸಂಘಟನೆಗೆ ಆರಂಭಗೊಂಡಿತು.

ಈ ಸಂಧರ್ಭದಲ್ಲಿ ನಿವೃತ್ತ ಸೇನಾನಿ ಗಿಲ್ಬರ್ಟ್ ಇವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಕೊಡವೂರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಆರೋಗ್ಯ ವಿಮೆಯನ್ನು ವಿತರಿಸಲಾಯಿತು.

ಕಳೆದ ಒಂದು ತಿಂಗಳ ಹಿಂದೆ ಒಬ್ಬ ವಿದ್ಯಾರ್ಥಿಗೆ ಅವಘಡ ಆದಾಗ ಅವರ ಕುಟುಂಬ ತುಂಬಾ ಕಷ್ಟದಲ್ಲಿ ಇರುವುದನ್ನು ಕಂಡು ಕೊಡವೂರಿನ ಶಾಲೆಯ ಎಲ್ಲಾ ಮಕ್ಕಳಿಗೆ ಆರೋಗ್ಯ ವಿಮೆಯನ್ನು ಮಾಡಿಕೊಡಲಾಯಿತು.

ವಿದ್ಯಾರ್ಥಿಗಳ ಚಿಕಿತ್ಸೆಗೆ 2,000, ಒಂದು ದಿನ ಆಸ್ಪತ್ರೆಯಲ್ಲಿ ಇದ್ದಲ್ಲಿ 25,000 ಹಾಗೂ ಮೃತಪಟ್ಟರೆ 50 ಸಾವಿರ ಸಿಗುವ ಆರೋಗ್ಯ ವಿಮೆಯನ್ನು ವಿಜಯ್ ಕೊಡವೂರು ಅವರ ಮುಂದಾಳತ್ವದಲ್ಲಿ ವಿತರಣೆ ಮಾಡಲಾಯಿತು.

ಇದಕ್ಕೆ ಸಹಕಾರ ನೀಡಿದ ಶ್ರೀನಿವಾಸ್ ಬಾಯರಿ ಕೊಡವೂರು, ರಮೇಶ್ ಶೆಟ್ಟಿಗಾರ್ ಉದ್ದಿನ ಹಿಟ್ಲು ಅವರನ್ನು ಗೌರವಿಸಲಾಯಿತು.

ರಾಮಣ್ಣ ಬಿ ದೇವಾಡಿಗ, ಚಂದ್ರಶೇಖರ ಎಂ ನಾಗರಬೆಟ್ಟ, ಉಮಾಪತಿ ಜೆ ಗುಜರನ್, ಸುಧಾಕರ್ ಎಲ್ಲೂರು, ನೀಲಕಂಠ ಸ್ವಾಮಿ ಎನ್ ಬಿ, ರಾಘವೇಂದ್ರ ರಾವ್ ( ಅಧ್ಯಕ್ಷರು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ) ಶ್ರೀನಿವಾಸ ಬಾಯರಿ ( ಬ್ಯಾಂಕ್ ಉದ್ಯೋಗಿ) ಉಪಸ್ಥಿತರಿದ್ದರು.