ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು, ಯುವ ಸಂಘ ಕೊಪ್ಪಲ್ ತೋಟ ಮತ್ತು ನಗರ ಸಭೆ ಉಡುಪಿ ಮತ್ತು ಸಾಹಸ್ ಎನ್. ಜಿ . ಓ ಜಂಟಿಯಾಗಿ ಆರೋಗ್ಯ ಸಮಾಜದ ನಿರ್ಮಾಣಕ್ಕಾಗಿ ಮನೆಯ ಹಸಿಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಉಚಿತ ಕಾಂಪೋಸ್ಟ್ ಡ್ರಮ್ ಮತ್ತು ಉಚಿತ ತರಕಾರಿ ಬೀಜ ವಿತರಣೆ ಕಾರ್ಯಕ್ರಮವು ಕೊಡವೂರಿನ ಕೊಪ್ಪಲ್ ತೋಟ ಯುವ ಸಂಘದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕೊಪ್ಪಲ್ ಯುವ ಸಂಘದ ಅಧ್ಯಕ್ಷರಾದ ಜನಾರ್ಧನ ಮೆಂಡನ್ , ವಿಜಯ್ ಕೊಡವೂರು ನಗರ ಸಭಾ ಸದಸ್ಯರು, ಸಾಹಸ್ ಸಂಸ್ಥೆಯ ಸೂಪರ್ವೈಸರ್ ವಿಶಾಲ ದೇವಾಡಿಗ, ವರುಣ್, ಸರೋಜಾ, ಪ್ರದಪ್, ಇನ್ನಿತರರು ಉಪಸ್ಥಿತರಿದ್ದರು.