ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ಭಾನುವಾರ ಸ್ವಚ್ಛತೆ ಸೇರಿದಂತೆ ವಿವಿಧ ಕಾರ್ಯಗಳನ್ನು ನಡೆಸಲಾಯಿತು.
4 ಹುಲ್ಲು ಕಟ್ಟಿಂಗ್ ಮಿಷನ್ ಮೂಲಕ ಗರ್ಡೆ ಪರಿಸರದ ಎಲ್ಲಾ ಮಾರ್ಗಗಳನ್ನು ಶುಚಿತ್ವ ಮಾಡುವ ಕಾರ್ಯ ನಡೆಯಿತು. 98ನೇ ಶ್ರಮದಾನ ಕಾರ್ಯಕ್ರಮದ ಮೂಲಕ 1ನೇ ಕ್ರಾಸ್ ಗರ್ಡೆ, 2ನೇ ಕ್ರಾಸ್ ಗರ್ಡೆ, 3ನೇ ಕ್ರಾಸ್ ಗರ್ಡೆ, 4ನೇ ಕ್ರಾಸ್ ಗರ್ಡೆ, 5ನೇ ಕ್ರಾಸ್ ಗರ್ಡೆ ಹಾಗೂ ಲಕ್ಷ್ಮೀನಗರ ಪೇಟೆಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.
ನಗರಸಭಾ ಸದಸ್ಯ ವಿಜಯ್ ಕೊಡವೂರು ಸ್ವಚ್ಛತಾ ಕಾರ್ಯದ ನೇತೃತ್ವ ವಹಿಸಿದ್ದರು. ಅಣ್ಣಪ್ಪ ಶೆಟ್ಟಿ ಜುಮಾದಿನಗರ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪ್ರಭಾತ್ ಕೊಡವೂರು, ಲಕ್ಷ್ಮೀನಗರ ಬೂತ್ ಅಧ್ಯಕ್ಷ ನವೀನ್ ಲಕ್ಷ್ಮೀನಗರ, ಅಮಿತ್ ಗರ್ಡೆ, ಸಂತೋಷ್ ಮದಗ, ವಿನಯ್ ಗರ್ಡೆ ಮೊದಲಾದವರು ಸಾಥ್ ನೀಡಿದರು.

















