ಉಡುಪಿ: ಅಖಿಲ ಭಾರತ ಸೈನಿಕ ಶಾಲಾ ಪರೀಕ್ಷೆಯ ಮೂಲಕ 6 ಮತ್ತು 9 ನೇ ತರಗತಿಗಳಿಗೆ 2020-21 ನೇ ಸಾಲಿನ ದಾಖಲಾತಿಗೆ ಹುಡುಗರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸೈನಿಕ ಶಾಲಾ ಪ್ರವೇಶ ಪರೀಕ್ಷೆಯು 6 ನೇ ತರಗತಿಗೆ ಸೈನಿಕ ಶಾಲೆ ಕೊಡಗು, ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು ನಗರ, ಚಿತ್ರದುರ್ಗ ಮತ್ತು ಬೈಲಕುಪ್ಪೆ (ಜಿಲ್ಲೆ-ಮೈಸೂರು) ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. 9 ನೇ ತರಗತಿ ಪ್ರವೇಶ ಪರೀಕ್ಷೆಯು ಸೈನಿಕ ಶಾಲೆ ಕೊಡಗಿನಲ್ಲಿ ನಡೆಯಲಿದೆ.
ನೋಂದಣಿ ಶುಲ್ಕವು ಸಾಮಾನ್ಯ ವರ್ಗ ಮತ್ತು ರಕ್ಷಣಾ ಇಲಾಖೆಯವರಿಗೆ 400 ರೂ ಮತ್ತು ಪರಿಶಿಷ್ಟ ಜಾತಿ/ ಪಂಗಡದವರಿಗೆ 250 ರೂ.ಗಳು. ಅರ್ಜಿ ಸಲ್ಲಿಸಲು ಸೆಪ್ಟಂಬರ್ 23 ಕೊನೆಯ ದಿನ.
ಆನ್‍ಲೈನ್ ನೋಂದಾವಣಿ ಸಮಯದಲ್ಲಿ ಪೋಷಕರು ಅಭ್ಯರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್, ಅಭ್ಯರ್ಥಿಯ ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಬೇಕು. ಅರ್ಜಿ ಶುಲ್ಕವನ್ನು ಕ್ರೆಡಿಟ್ ಕಾರ್ಡ್ /ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಮೂಲಕ ಕಟ್ಟಬಹುದು. ಅಭ್ಯರ್ಥಿಯ ಜನನ ದಿನಾಂಕ, ಜಾತಿ ದೃಢೀಕರಣ ಪತ್ರ, ಪೋಷಕರ ಇ- ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ, ಪೋಷಕರ ಖಾಯಂ ಮತ್ತು ಪೋಸ್ಟಲ್ ವಿಳಾಸ, ವಾಸ ದೃಢೀಕರಣ ಪತ್ರವನ್ನು ಇಟ್ಟುಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8510055577, 8510044411, 08276-278963 ಅನ್ನು ಸಂಪರ್ಕಿಸುವಂತೆ ಕೊಡಗು ಸೈನಿಕ ಶಾಲೆಯ ಪ್ರಕಟಣೆ ತಿಳಿಸಿದೆ.












