ಒಗ್ಗರಣೆಗೆ ಹಾಕಿದ ಕರಿಬೇವನ್ನು ಬೇಡವೆಂದು ಬಿಸಾಡುವ ಮುನ್ನ ಅದರ ಆಯುರ್ವೇದೀಯ ಪ್ರಯೋಜನದ ಬಗ್ಗೆ ತಿಳಿದುಕೊಳ್ಳಿ!!

ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ವಿಟಮಿನ್ ಸಿ, ಐ-ಕಾರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಮುಂತಾದ ಅಂಶಗಳನ್ನು ಹೊಂದಿರುವ ಕರಿಬೇವಿನ ಸೊಪ್ಪಿನ ಆರೋಗ್ಯದ ಪ್ರಯೋಜನಗಳು ಒಂದೆರೆಡಲ್ಲ. ಭಾರತೀಯ ಆಹಾರ ಪದ್ದತಿ ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ-ತಿನಿಸಿನ ಅವಿಭಾಜ್ಯ ಅಂಗವಾಗಿರುವ ಕರಿಬೇವಿನ ಸೊಪ್ಪನ್ನು ನೋಡದವರೇ ಇಲ್ಲ. ಬಹುತೇಕ ಮಂದಿ ಆಹಾರ ಪದಾರ್ಥಗಳಲ್ಲಿ ಹಾಕಲಾಗಿರುವ ಕರಿಬೇವಿನ ಸೊಪ್ಪನ್ನು ತೆಗೆದು ಬದಿಗಿಡುತ್ತಾರೆ ಇಲ್ಲವೆ ಬಿಸಾಡುತ್ತಾರೆ. ಆದರೆ ಈ ಸೊಪ್ಪನ್ನು ಸೇವಿಸುವುದರಿಂದ ಆಗುವ ಅಗಾಧ ಪ್ರಯೋಜನಗಳಿಂದ ಅವರು ವಂಚಿತರಾಗುತ್ತಾರೆ.

Use curry leaves in these ways to include them in your daily diet | The  Times of India

ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿವೆ

  • ರಕ್ತದೊತ್ತಡವನ್ನು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ
  • ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ
  • ಆಂಟಿವೈರಲ್ ಗುಣವನ್ನು ಹೊಂದಿದೆ
  • ಆಂಟಿಫಂಗಲ್ ಗುಣವನ್ನು ಹೊಂದಿದೆ
  • ಆಂಟಿಪ್ರೊಟೊಜೋಲ್ ಗುಣವನ್ನು ಹೊಂದಿದೆ
  • ವಿರೇಚಕ ಪರಿಣಾಮವನ್ನು ಹೊಂದಿದೆ (ಮಲಬದ್ಧತೆಯಲ್ಲಿ ಪರಿಣಾಮಕಾರಿ)
  • ಅತಿಸಾರ ವಿರೋಧಿ ಗುಣವನ್ನು ಹೊಂದಿದೆ
  • ಗಾಯ-ಗುಣಪಡಿಸುವ ಕ್ರಿಯೆಯನ್ನು ಹೊಂದಿದೆ
  • ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ
  • ಮಧುಮೇಹ ವಿರೋಧಿ ಗುಣವನ್ನು ಹೊಂದಿದೆ
  • ಉರಿಯೂತವನ್ನು ಕಡಿಮೆ ಮಾಡುವ ಕ್ರಿಯೆಯನ್ನು ಹೊಂದಿದೆ
  • ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ
  • ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಪರಿಣಾಮವನ್ನು ಹೊಂದಿದೆ
  • ಹುಣ್ಣು ವಿರೋಧಿ ಗುಣವನ್ನು ಹೊಂದಿದೆ
  • ಟ್ಯೂಮರ್ ನಿರೋಧಕ ಗುಣವನ್ನು ಹೊಂದಿದೆ
  • ಚರ್ಮದ ಆರೋಗ್ಯಕ್ಕೆ ಒಳ್ಳೆಯದಾಗಿದೆ
  • ಕೂದಲು ಉದುರುವಿಕೆ ಮತ್ತು ಅಕಾಲ ನರೆಯುವಿಕೆಯನ್ನು ತಡೆಗಟ್ಟಲು ಕರಿಬೇವಿನ ಸೊಪ್ಪನ ಸೇವನೆ ಒಳಿತು
  • ಕರಿಬೇವಿನ ಎಣ್ಣೆಯು ವಿಟಮಿನ್‌ಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ ಮತ್ತು ಮೂಳೆಗಳನ್ನು ಬಲಪಡಿಸಲು ಬಳಸಬಹುದು, ಆಸ್ಟಿಯೊಪೊರೋಸಿಸ್ (ದುರ್ಬಲ ಮೂಳೆಗಳು) ಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ಕ್ಯಾಲ್ಸಿಯಂ ಕೊರತೆಯನ್ನು ನಿರ್ವಹಿಸಬಹುದು
  • ಬಿರಾರಿ ಆರ್ ಮತ್ತು ಇತರರು ನಡೆಸಿದ ಪ್ರಾಣಿ ಅಧ್ಯಯನಗಳ ಪ್ರಕಾರ, ಕರಿಬೇವಿನ ಸಾರವು ಫೈಟೊಕೆಮಿಕಲ್ಸ್ ಮತ್ತು ಡಯೆಟರಿ ಫೈಬರ್ ಇರುವಿಕೆಯನ್ನು ತೋರಿಸುತ್ತದೆ ಅದು ತೂಕ ನಿರ್ವಹಣೆ ಮತ್ತು ಕೊಬ್ಬಿನ ಕರಗುವಿಕೆಗೆ ಸಹಾಯ ಮಾಡುತ್ತದೆ
  • ಒಸಡುಗಳನ್ನು ಬಲಪಡಿಸಲು ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಲು ಕರಿಬೇವಿನ ಕಡ್ಡಿಗಳನ್ನು ಬಳಸಬಹುದು

ಕರಿಬೇವಿನ ಸೊಪ್ಪನ್ನು ಹಾಗೆಯೇ ಸೇವಿಸಬಹುದು ಅಥವಾ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಸೇವಿಸಬಹುದು. ಕರಿಬೇವಿನ ಎಣ್ಣೆಯನ್ನು ಉಪಯೋಗಿಸಬಹುದು.

Masoor Dal Fry With Tomato & Curry Leaves | Masoor Dal Fry | Red Lentil Dal  | Masoor Dal Recipe - YouTube

ವಿ.ಸೂ: ಕರಿಬೇವಿನ ಸೊಪ್ಪು ಕೆಲವರಲ್ಲಿ ಅಲರ್ಜಿಯನ್ನು ಉಂಟು ಮಾಡಬಹುದು. ಬಳಸುವ ಮುನ್ನ ತಜ್ಞರ ಸಲಹೆ ಸೂಚನೆ ಪಡೆಯುವುದು ಒಳಿತು.