ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬು, ವಿಟಮಿನ್ ಸಿ, ಐ-ಕಾರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣ ಮುಂತಾದ ಅಂಶಗಳನ್ನು ಹೊಂದಿರುವ ಕರಿಬೇವಿನ ಸೊಪ್ಪಿನ ಆರೋಗ್ಯದ ಪ್ರಯೋಜನಗಳು ಒಂದೆರೆಡಲ್ಲ. ಭಾರತೀಯ ಆಹಾರ ಪದ್ದತಿ ಅದರಲ್ಲೂ ದಕ್ಷಿಣ ಭಾರತೀಯ ತಿಂಡಿ-ತಿನಿಸಿನ ಅವಿಭಾಜ್ಯ ಅಂಗವಾಗಿರುವ ಕರಿಬೇವಿನ ಸೊಪ್ಪನ್ನು ನೋಡದವರೇ ಇಲ್ಲ. ಬಹುತೇಕ ಮಂದಿ ಆಹಾರ ಪದಾರ್ಥಗಳಲ್ಲಿ ಹಾಕಲಾಗಿರುವ ಕರಿಬೇವಿನ ಸೊಪ್ಪನ್ನು ತೆಗೆದು ಬದಿಗಿಡುತ್ತಾರೆ ಇಲ್ಲವೆ ಬಿಸಾಡುತ್ತಾರೆ. ಆದರೆ ಈ ಸೊಪ್ಪನ್ನು ಸೇವಿಸುವುದರಿಂದ ಆಗುವ ಅಗಾಧ ಪ್ರಯೋಜನಗಳಿಂದ ಅವರು ವಂಚಿತರಾಗುತ್ತಾರೆ.
ಆಯುರ್ವೇದದ ಪ್ರಕಾರ, ಕರಿಬೇವಿನ ಎಲೆಗಳು ಅನೇಕ ಪ್ರಯೋಜನಕಾರಿ ಗುಣಗಳನ್ನು ಹೊಂದಿವೆ
- ರಕ್ತದೊತ್ತಡವನ್ನು ಕಡಿಮೆ ಮಾಡುವ ಪರಿಣಾಮವನ್ನು ಹೊಂದಿದೆ
- ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ
- ಆಂಟಿವೈರಲ್ ಗುಣವನ್ನು ಹೊಂದಿದೆ
- ಆಂಟಿಫಂಗಲ್ ಗುಣವನ್ನು ಹೊಂದಿದೆ
- ಆಂಟಿಪ್ರೊಟೊಜೋಲ್ ಗುಣವನ್ನು ಹೊಂದಿದೆ
- ವಿರೇಚಕ ಪರಿಣಾಮವನ್ನು ಹೊಂದಿದೆ (ಮಲಬದ್ಧತೆಯಲ್ಲಿ ಪರಿಣಾಮಕಾರಿ)
- ಅತಿಸಾರ ವಿರೋಧಿ ಗುಣವನ್ನು ಹೊಂದಿದೆ
- ಗಾಯ-ಗುಣಪಡಿಸುವ ಕ್ರಿಯೆಯನ್ನು ಹೊಂದಿದೆ
- ಕ್ಯಾನ್ಸರ್ ವಿರೋಧಿ ಗುಣವನ್ನು ಹೊಂದಿದೆ
- ಮಧುಮೇಹ ವಿರೋಧಿ ಗುಣವನ್ನು ಹೊಂದಿದೆ
- ಉರಿಯೂತವನ್ನು ಕಡಿಮೆ ಮಾಡುವ ಕ್ರಿಯೆಯನ್ನು ಹೊಂದಿದೆ
- ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ
- ಕೊಲೆಸ್ಟ್ರಾಲ್-ಕಡಿಮೆಗೊಳಿಸುವ ಪರಿಣಾಮವನ್ನು ಹೊಂದಿದೆ
- ಹುಣ್ಣು ವಿರೋಧಿ ಗುಣವನ್ನು ಹೊಂದಿದೆ
- ಟ್ಯೂಮರ್ ನಿರೋಧಕ ಗುಣವನ್ನು ಹೊಂದಿದೆ
- ಚರ್ಮದ ಆರೋಗ್ಯಕ್ಕೆ ಒಳ್ಳೆಯದಾಗಿದೆ
- ಕೂದಲು ಉದುರುವಿಕೆ ಮತ್ತು ಅಕಾಲ ನರೆಯುವಿಕೆಯನ್ನು ತಡೆಗಟ್ಟಲು ಕರಿಬೇವಿನ ಸೊಪ್ಪನ ಸೇವನೆ ಒಳಿತು
- ಕರಿಬೇವಿನ ಎಣ್ಣೆಯು ವಿಟಮಿನ್ಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ ಮತ್ತು ಮೂಳೆಗಳನ್ನು ಬಲಪಡಿಸಲು ಬಳಸಬಹುದು, ಆಸ್ಟಿಯೊಪೊರೋಸಿಸ್ (ದುರ್ಬಲ ಮೂಳೆಗಳು) ಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ಕ್ಯಾಲ್ಸಿಯಂ ಕೊರತೆಯನ್ನು ನಿರ್ವಹಿಸಬಹುದು
- ಬಿರಾರಿ ಆರ್ ಮತ್ತು ಇತರರು ನಡೆಸಿದ ಪ್ರಾಣಿ ಅಧ್ಯಯನಗಳ ಪ್ರಕಾರ, ಕರಿಬೇವಿನ ಸಾರವು ಫೈಟೊಕೆಮಿಕಲ್ಸ್ ಮತ್ತು ಡಯೆಟರಿ ಫೈಬರ್ ಇರುವಿಕೆಯನ್ನು ತೋರಿಸುತ್ತದೆ ಅದು ತೂಕ ನಿರ್ವಹಣೆ ಮತ್ತು ಕೊಬ್ಬಿನ ಕರಗುವಿಕೆಗೆ ಸಹಾಯ ಮಾಡುತ್ತದೆ
- ಒಸಡುಗಳನ್ನು ಬಲಪಡಿಸಲು ಮತ್ತು ಹಲ್ಲುಗಳನ್ನು ಸ್ವಚ್ಛಗೊಳಿಸಲು ಕರಿಬೇವಿನ ಕಡ್ಡಿಗಳನ್ನು ಬಳಸಬಹುದು
ಕರಿಬೇವಿನ ಸೊಪ್ಪನ್ನು ಹಾಗೆಯೇ ಸೇವಿಸಬಹುದು ಅಥವಾ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಸೇವಿಸಬಹುದು. ಕರಿಬೇವಿನ ಎಣ್ಣೆಯನ್ನು ಉಪಯೋಗಿಸಬಹುದು.
ವಿ.ಸೂ: ಕರಿಬೇವಿನ ಸೊಪ್ಪು ಕೆಲವರಲ್ಲಿ ಅಲರ್ಜಿಯನ್ನು ಉಂಟು ಮಾಡಬಹುದು. ಬಳಸುವ ಮುನ್ನ ತಜ್ಞರ ಸಲಹೆ ಸೂಚನೆ ಪಡೆಯುವುದು ಒಳಿತು.