ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ,ಕನ್ನಡ ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ ಉಡುಪಿ ಇವರ ಸಹಯೋಗದೊಂದಿಗೆ ಕಿಶೋರ ಯಕ್ಷಗಾನ ಸಂಭ್ರಮ -2022ರ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ವಿದ್ಯಾರ್ಥಿಗಳಿಗೆ ಯಕ್ಷ ಶಿಕ್ಷಣವನ್ನು ನೀಡಿದ ಗುರುಗಳನ್ನು ಸನ್ಮಾನಿಸಿದರು. ಕರ್ನಾಟಕದ ಗಂಡು ಕಲೆಯಾದ ಯಕ್ಷಗಾನವು ಹಿಂದಿನ ಅಶಿಕ್ಷಿತ ಜನತೆಗೆ ದೇವರ ಪರಿಚಯ ಮತ್ತು ಪುರಾಣಗಳ ಸಾರವನ್ನು ತಿಳಿಸಿದೆ. ಈಗಿನ ಪ್ರಜೆಗಳಿಗೆ ಅಧ್ಯಾತ್ಮದ ಬಗ್ಗೆ ತಿಳಿಯಲು ಇದು ಉತ್ತಮವಾದ ವೇದಿಕೆಯಾಗಲಿ ಎಂದು ಅನುಗ್ರಹಿಸಿದರು.
ಸಮಾರಂಭದಲ್ಲಿ ಕರ್ನಾಟಕ ಸರಕಾರದ ಇಂಧನ, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಸುನಿಲ್ ಕುಮಾರ್, ಹತ್ತನೇ ತರಗತಿಯಲ್ಲಿ ಉತ್ತಮ ಅಂಕ ಗಳಿಸಿದ ಶಾಲೆಯ ಶಿಕ್ಷಕರಿಗೆ “ಸಾಧಕ ಶಿಕ್ಷಕ” ಪ್ರಶಸ್ತಿಯನ್ನು ನೀಡಿದರು.
ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್, ಪುತ್ತೂರು ಪ್ರವೀಣ್ ಶೆಟ್ಟಿ ಪೂನಾ, ಪಣಂಬೂರು ವಾಸುದೇವ ಐತಾಳ್, ಎನ್.ಶಿವರಾಜ್ ಡಿ.ಡಿ.ಪಿ.ಐ ಉಡುಪಿ, ಡಾ.ಅಶೋಕ್ ಕಾಮತ್ ಡಯಟ್ ಉಡುಪಿ, ರಂಗನಾಥ್ ಕೆ.ಶಿಕ್ಷಣಾಧಿಕಾರಿ, ಬ್ರಹ್ಮಾವರ, ಡಿ.ಎಚ್.ಚಂದ್ರೇಗೌಡ ಶಿಕ್ಷಣಾಧಿಕಾರಿ, ಉಡುಪಿ, ಮೀನಾ ಲಕ್ಷಣ ಅಡ್ಯಂತಾಯ, ಉಡುಪಿ ಕನ್ನಡ ಸಂಸ್ಕೃತಿ ಇಲಾಖೆಯ ಜಾಹ್ನವಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಭಾಗವಹಿಸಿದ್ದರು.
ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.












