ಕಿರಿಮಂಜೇಶ್ವರ: ಅಗಸ್ಟ್ 20ರಂದು ಶಾಲಾ ಶಿಕ್ಷಣ ಇಲಾಖೆ ಹಾಗೂ ಸೇಂಟ್ ಫ್ರಾನ್ಸಿಸ್ ಕ್ಸೆವಿಯರ್ ಇಂಗ್ಲಿಷ್ ಮೀಡಿಯಂ ಶಾಲೆ, ಉದ್ಯಾವರ ಇವರ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆ ಕಿರಿಮಂಜೇಶ್ವರದ ರಜತ್ ( 8 ನೆ ತರಗತಿ)14 ವರ್ಷದ ಒಳಗಿನ ವಯೋಮಿತಿಯ 50 ಕೆಜಿ ವಿಭಾಗದಲ್ಲಿ ವಿಜಯಶಾಲಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಹೆಮ್ಮೆಯ ವಿದ್ಯಾರ್ಥಿಯ ಅಪೂರ್ವವಾದ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿ ಇದರ ಪ್ರಾಂಶುಪಾಲರಾದ ಗಣೇಶ ಮೊಗವೀರರವರು, ಮುಖ್ಯ ಶಿಕ್ಷಕಿ ದೀಪಿಕಾ ಆಚಾರ್ಯ ಹಾಗೂ ಸಂಸ್ಥೆಯ ಎಲ್ಲ ಬೋಧಕ ಬೋಧಕೇತರ ವರ್ಗದವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.












