ಉಡುಪಿ: ಕಿನ್ನಿಮೂಲ್ಕಿ ಕನ್ನರ್ಪಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 18ನೇ ವರ್ಷದ ಗಣೇಶೋತ್ಸವವು ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ. 19 ರಿಂದ 24ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನಡೆಯಿತು.
ಸೆ. 24ರಂದು ಗಣೇಶನ ವಿಸರ್ಜನಾ ಮೆರವಣಿಗೆಯ ಶೋಭಾ ಯಾತ್ರೆಯು ವಿವಿಧ ವೇಷಭೂಷಣ, ವೇದ ಘೋಷಗಳೊಂದಿಗೆ ಫಯರ್ ಸ್ಟೇಷನ್ ರಸ್ತೆ, ಅಜ್ಜರಕಾಡು ಪಾರ್ಕ್, ಗೋವಿಂದ ಕಲ್ಯಾಣ ಮಂಟಪ ಮಾರ್ಗವಾಗಿ ಕಿನ್ನಿಮುಲ್ಕಿ ಮುಖ್ಯ ರಸ್ತೆ, ಬಲಾಯಿಪಾದೆ, ಸ್ವಾಗತ ಗೋಪುರದಿಂದ ಮೂಲಕ ಸಾಗಿ ಬಂದು ಕನ್ನರ್ಪಾಡಿ ದೇವಸ್ಥಾನದ ಕಣ್ವ ಪುಷ್ಕರಣಿಯಲ್ಲಿ ಜಲ ಸ್ತಂಭನ ಮಾಡಲಾಯಿತು.
ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರಭಾಶಂಕರ್ ಪ್ರಭಾಶಾಲಿ, ಅಧ್ಯಕ್ಷ ನಾರಾಯಣರಾವ್ ಕನ್ನರ್ಪಾಡಿ, ಕಾರ್ಯಾಧ್ಯಕ್ಷ ಸಂಜೀವ ಎ. ಕನ್ನರ್ಪಾಡಿ, ಪ್ರಧಾನ ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಪಾಲ್ಗೊಂಡಿದ್ದರು.