ಫುಟ್ಬಾಲ್ ದಂತಕಥೆ, ಬ್ರೆಜಿಲ್ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಪೀಲೆ 92 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಆಟವನ್ನು ಆಡಿದ ಸರ್ವಶ್ರೇಷ್ಠ ಆಟಗಾರ ತಮ್ಮ 82 ನೇ ವಯಸ್ಸಿನಲ್ಲಿ ಬಾರದ ಲೋಕದತ್ತ ಪಯಣಿಸಿದ್ದಾರೆ. ಅಪ್ರತಿಮ, ಪ್ರತಿಭೆ, ಚುರುಕುತನ ಮತ್ತು ಸೃಜನಶೀಲತೆಯಿಂದ ತುಂಬಿದ ಸುಂದರವಾದ ಆಟದಿಂದ ಮೂರು-ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿರುವ ಪೀಲೆ ಅಕ್ಟೋಬರ್ 23, 1940 ರಂದು, ದಕ್ಷಿಣ ಬ್ರೆಜಿಲ್ನ ಟ್ರೆಸ್ ಕೊರಾಕೋಸ್ನಲ್ಲಿ ಬಡಕುಟುಂಬದಲ್ಲಿ ಜನಿಸಿದರು.
ಪೀಲೆ ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿ ಉಳಿದಿದ್ದಾರೆ. ಅವರು 1958, 1962 ಮತ್ತು 1970 ರಲ್ಲಿ ಮೂರು ಬಾರಿ ಟ್ರೋಫಿಯನ್ನು ಗೆದ್ದಿದ್ದಾರೆ ಮತ್ತು 12 ವಿಶ್ವಕಪ್ ಗೋಲುಗಳನ್ನು ಗಳಿಸಿದ್ದಾರೆ. 1958 ರಲ್ಲಿ ಅತ್ಯಂತ ಕಿರಿಯ 17 ನೇ ವಯಸ್ಸಿನಲ್ಲಿ, ಪೀಲೆ ವಿಶ್ವಕಪ್ ಫೈನಲ್ನಲ್ಲಿ ಎರಡು ಬಾರಿ ಗೋಲು ಗಳಿಸಿ, ಬ್ರೆಜಿಲ್ ಆತಿಥೇಯ ಸ್ವೀಡನ್ ಅನ್ನು 5-2 ರಿಂದ ಸೋಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪುಟ್ಬಾಲ್ ಲೋಕದಲ್ಲಿ ಅರ್ಜೆಂಟೀನಾದ ಮರಡೋನಾ ಮತ್ತು ಬ್ರೆಜಿಲಿನ ಪೀಲೆ ಹಲವಾರು ಯುವಕರಿಗೆ ಸೂರ್ತಿಯಾಗಿದ್ದಾರೆ.
ಪೀಲೆ ಮೂರು ಬಾರಿ ವಿವಾಹವಾಗಿದ್ದಾರೆ ಮತ್ತು ಏಳು ಮಕ್ಕಳನ್ನು ಹೊಂದಿದ್ದಾರೆ.