ಆರು ವರ್ಷಗಳ ಬಳಿಕ ಮತ್ತೆ ವೇದಿಕೆ ಹಂಚಿಕೊಂಡ ಕುಚ್ಚಿಕ್ಕೂ ಗೆಳೆಯರು: ಸುಮಲತಾ ಅಂಬರೀಷ್ ಹುಟ್ಟುಹಬ್ಬದಲ್ಲಿ ಕಿಚ್ಚ ಸುದೀಪ್ ಹಾಗೂ ದರ್ಶನ್ ಮುಖಾಮುಖಿ

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡುವ ಸುದ್ದಿಯೊಂದು ಬಂದಿದೆ. ಕಳೆದ ಆರು ವರ್ಷಗಳಿಂದ ಮುಖಮುಖಿಯಾಗದ ಚಂದನವನದ ಕುಚ್ಚಿಕ್ಕೂ ಗೆಳೆಯರಾದ ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಸುಮಲತಾ ಅಂಬರೀಶ್‌ ಅವರ ಬರ್ತ್‌ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಯಾವುದೋ ಮನಸ್ತಾಪದ ಕಾರಣ ದೂರಾಗಿದ್ದ ಕುಚಿಕು ಗೆಳೆಯರಾದ ದರ್ಶನ್ ಮತ್ತು ಸುದೀಪ್ ಮತ್ತೆ ಒಂದಾಗಬೇಕೆಂದು ಚಂದನವನ ಬಯಸುತ್ತಿದೆ. ಆದರೆ ದಿಗ್ಗಜ ನಟರಿಬ್ಬರೂ ಈ ಬಗ್ಗೆ ಒಲವು ತೋರಿಲ್ಲ. ಇದೀಗ ಸುಮಲತಾ ಅಂಬರೀಷ್ ಬರ್ತ್ ಡೇ ಪಾರ್‍ತಿಯಲ್ಲಿ ಇವರಿಬ್ಬರೂ ಆರುವರ್ಷಗಳ ಬಳಿಕ ಮುಖಾಮುಖಿಯಾಗಿರುವುದು ಅಭಿಮಾನಿಗಳಲ್ಲಿ ಸಂತಸ ತಂದಿದೆ.

ನಟಿ ಸುಮಲತಾ ಅಂಬರೀಶ್‌ ಆಗಸ್ಟ್‌ 26 ರಂದು ತಮ್ಮ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನವನ್ನು ಸಿನಿಮಾ ಮಂದಿಯ ಜತೆಗೆ ಕಳೆದಿದ್ದಾರೆ. ಆಪ್ತರಷ್ಟೇ ಇದ್ದ ಈ ಪಾರ್ಟಿಯಲ್ಲಿ ನಟ ಸುದೀಪ್‌ ಮತ್ತು ದರ್ಶನ್‌ ಇಬ್ಬರೂ ಹಾಜರಾಗಿದ್ದಾರೆ. ಸುಮಲತಾ ಅವರಿಗೆ ಶುಭಾಶಯ ಕೋರಿದ ನಟರು ಒಂದೇ ವೇದಿಕೆಯಲ್ಲಿ ತುಸು ದೂರದ ಅಂತರದಲ್ಲಿ ನಿಂತಿದ್ದಾರೆ. ನಟಿ ಸುಮಲತಾ ಒಂದೇ ಚಮಚದಲ್ಲಿಇಬ್ಬರಿಗೂ ಕೇಕ್ ಕೂಡಾ ತಿನ್ನಿಸಿದ್ದಾರೆ. ಈ ವಿಡೀಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಕುಚ್ಚಿಕ್ಕೂ ಗೆಳೆಯರು ಮತ್ತೆ ಒಂದಾಗುತ್ತಾರಾ ಎನ್ನುವುದಕ್ಕೆ ಕಾಲವೆ ಉತ್ತರಿಸಬೇಕು.