ಮೊಳಕಾಲ್ಮೂರು: ಕನ್ನಡ ಚಿತ್ರನಟ ಕಿಚ್ಚ ಸುದೀಪ್ ಅವರು ಬುಧವಾರ ಚಿತ್ರದುರ್ಗದಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಪರ ಪ್ರಚಾರ ನಡೆಸಿದರು. ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವೀಡಿಯೊದಲ್ಲಿ, ಕಿಚ್ಚ ಸುದೀಪ್ ತಿಪ್ಪೇಸ್ವಾಮಿ ಮತ್ತು ಇತರ ಬಿಜೆಪಿ ನಾಯಕರೊಂದಿಗೆ ಟ್ರಕ್‌ನಲ್ಲಿ ನಿಂತು ಜನಸಮೂಹದತ್ತ ಕೈ ಬೀಸುತ್ತಿರುವುದು ಕಂಡುಬಂದಿದೆ.
#WATCH | Kannada actor Kiccha Sudeep campaigns for Bharatiya Janata Party candidate from Molakalmuru Assembly constituency, S Thippeswamy, in Chitradurga#KarnatakaElections pic.twitter.com/CL7I4mY0UG
— ANI (@ANI) April 26, 2023
ವಾಹನದ ಮುಂದೆ ನಾಯಕರು ಮತ್ತು ಬೆಂಬಲಿಗರ ದಂಡು ನಾಯಕರು ಮತ್ತು ನಟರಿಗೆ ಜಯಕಾರ ಹಾಕುತ್ತಿದ್ದರು, ಕೆಲವರು ಮತ್ತೊಂದು ಟ್ರಕ್‌ನಲ್ಲಿ ನಿಂತಿದ್ದರು.
🥵 Craze Ka Baap 🔥🤙#KicchaSudeep𓃵 #KicchaSudeep#Kiccha46 #BillaRangaBaashaa @KicchaSudeep pic.twitter.com/EpOe78ss9H
— South Sudeepians – MAX (@SouthSudeepians) April 26, 2023
ಈ ತಿಂಗಳ ಆರಂಭದಲ್ಲಿ, ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಇತರ ಬಿಜೆಪಿ ನಾಯಕರೊಂದಿಗೆ ಸುದೀಪ್ ಶಿಗ್ಗಾಂವ್‌ನಲ್ಲಿ ರೋಡ್ ಶೋ ನಡೆಸಿದ್ದರು. ಬೊಮ್ಮಾಯಿಗೆ ತಮ್ಮ ಬೆಂಬಲವನ್ನು ನೀಡಿರುವುದನ್ನು ಪ್ರತಿಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.
ಬೊಮ್ಮಾಯಿ ಅವರುಚುನಾವಣಾಧಿಕಾರಿಯ ಮುಂದೆ ತಮ್ಮ ನಾಮಪತ್ರ ಸಲ್ಲಿಸಿದಾಗಲೂ ಅವರ ಜೊತೆಗೆ ನಟ ಸುದೀಪ್ ಭಾಗಿಯಾಗಿದ್ದರು. 2008ರಿಂದ ಮೂರು ಬಾರಿ ಶಾಸಕರಾಗಿದ್ದ ಶಿಗ್ಗಾಂವಿ ಕ್ಷೇತ್ರಕ್ಕೆ ಬೊಮ್ಮಾಯಿ ಮರು ಆಯ್ಕೆ ಬಯಸಿದ್ದಾರೆ.