ಉಡುಪಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಸದಸ್ಯೆ ಮತ್ತು ಬಿಜೆಪಿ ನಾಯಕಿ ಖುಷ್ಬು ಸುಂದರ್ ಗುರುವಾರ ಖಾಸಗಿ ಪ್ಯಾರಾಮೆಡಿಕಲ್ ಕಾಲೇಜಿನ ವಾಶ್‌ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಇದ್ದ ವಿಚಾರವನ್ನು ತಳ್ಳಿಹಾಕಿದ್ದು ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.
ಖುಷ್ಬೂ ಪ್ರಕರಣದ ತನಿಖೆಗಾಗಿ ಉಡುಪಿಯ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ಗೆ ಭೇಟಿ ನೀಡಿ ಆಡಳಿತ ಮಂಡಳಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಶೌಚಾಲಯಗಳಲ್ಲಿ ಹಿಡನ್ ಕ್ಯಾಮೆರಾಗಳಿದ್ದವು ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲಿ ಸತ್ಯಾಂಶವಿಲ್ಲ. ಸುಳ್ಳು ವಿಡಿಯೋಗಳು ಹರಿದಾಡುತ್ತಿವೆ. ಅದೊಂದು ಸಂಸ್ಥೆ ಆದ್ದರಿಂದ ಯಾವುದೇ ಹಿಡನ್ ಕ್ಯಾಮೆರಾಗಳು ಇರುವಂತಿಲ್ಲ. ನಾವು ಪೊಲೀಸರೊಂದಿಗೆ ಮಾತನಾಡುತ್ತಿದ್ದೇವೆ. ಪೊಲೀಸ್ ಇಲಾಖೆಯಿಂದ ತನಿಖೆ ಮತ್ತು ನಮ್ಮ ಕಡೆಯಿಂದ ತನಿಖೆ ಮುಂದುವರಿಯುತ್ತದೆ ಮತ್ತು ನಾವು ಶೀಘ್ರದಲ್ಲೇ ತೀರ್ಮಾನಕ್ಕೆ ಬರುತ್ತೇವೆ ಎಂದು ಅವರು ಹೇಳಿದ್ದಾರೆ.
ಯಾವುದೇ ಧರ್ಮದ ಹೊರತಾಗಿಯೂ ಮಹಿಳೆಯರ ರಕ್ಷಣೆ ಆಯೋಗದ ಹೊಣೆ ಎಂದಿರುವ ಅವರು ಮತ್ತು ಘಟನೆಗೆ ಕೋಮು ಬಣ್ಣ ನೀಡದಿರಲು ಒತ್ತಾಯಿಸಿದ್ದಾರೆ.
ಎನ್‌ಸಿಡಬ್ಲ್ಯೂ ಮತ್ತು ಪೊಲೀಸರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದು, ನ್ಯಾಯಾಧೀಶರಂತೆ ಕಾರ್ಯನಿರ್ವಹಿಸದೆ ತನಿಖೆ ನಡೆಸುತ್ತಾರೆ. ಸಂಸ್ಥೆಯು ಮಹಿಳೆಯರನ್ನು ರಕ್ಷಿಸಲು ಬದ್ಧವಾಗಿದೆ ಮತ್ತು ಯಾವುದೇ ಕೋಮು ಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ಕೆಲಸ ಮಾಡುವುದಿಲ್ಲ ಎಂದಿದ್ದಾರೆ.
ಉಡುಪಿ ಪೊಲೀಸರು ಕೂಡ ಘಟನೆಯಲ್ಲಿ ಯಾವುದೇ ಕೋಮು ವಿಚಾರ ಇರುವುದನ್ನು ನಿರಾಕರಿಸಿದ್ದಾರೆ.