ಕೇರಳ: ಮಾಸ್ಕ್ ಗಳನ್ನು ಜನಸಾಮಾನ್ಯರು ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಬಳಸುತ್ತಿದ್ದರೆ, ಇಲ್ಲೊಬ್ಬ ಅಸಾಮಿ ಮಾಸ್ಕ್ ಒಳಗಡೆ 40 ಗ್ರಾಂ ಚಿನ್ನವನ್ನು ಕಳ್ಳಸಾಗಾಣಿಕೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ಕರ್ನಾಟಕ ಮೂಲದ ಅಮರ್ ಸಿಕ್ಕಿಬಿದ್ದ ಖದೀಮ. ಈತ ದುಬೈನಿಂದ ಮಂಗಳವಾರ ಸಂಜೆ ಕೇರಳದ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದು ಇಳಿದಿದ್ದಾನೆ.
ತಾನು ಧರಿಸಿದ್ದ ಎನ್-95 ಮಾಸ್ಕ್ ನಲ್ಲಿ 40 ಗ್ರಾಂ ಚಿನ್ನ ಬಚ್ಚಿಟ್ಟು ಸಾಗಾಣಿಕೆ ಮಾಡಲು ಯತ್ನಿಸಿರುವಾಗ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅಧಿಕಾರಿಗಳು ಈತನನ್ನು ಸಂಪೂರ್ಣ ತಪಾಸಣೆ ನಡೆಸಿದ್ದು, ಮಾಸ್ಕ್ ನಲ್ಲಿದ್ದ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.