ಉಡುಪಿ: ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆ, ನೀಚ ಕೃತ್ಯವನ್ನು ಖಂಡಿಸುತ್ತೇನೆ. ಬೆಂಗಳೂರಿನ ಕಾವಲ್ ಸಂದ್ರ ಪೊಲೀಸ್ ವಸತಿಗೃಹದ ಗೇಟ್ ಮುರಿದು ಪೊಲೀಸರ ಮನೆಗಳಿಗೆ ನುಗ್ಗಿ ಮಕ್ಕಳ, ಮಹಿಳೆಯರ ಮೇಲೆ ಹಲ್ಲೆ ಮಾಡಲು ಮುಂದಾದ ಕಿಡಿಗೇಡಿಗಳ ಮೇಲೆ ಕ್ರಮ ಕೈಗೊಂಡು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಕಾಪು ಮಂಡಲದ ಬಿ.ಜೆ.ಪಿ ಯುವ ಮೋರ್ಚಾ ಪಿತ್ರೋಡಿ ಅಧ್ಯಕ್ಷ ಸಚಿನ್ ಸುವರ್ಣ ಆಗ್ರಹಿಸಿದ್ದಾರೆ.
ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದು ಬಂದ ಮತಾಂಧ ಉಗ್ರರು ಪೊಲೀಸರ ವಾಹನಗಳನ್ನು ಪುಡಿ ಮಾಡಿ, ಬೆಂಕಿ ಹಚ್ಚಿ, ಪೊಲೀಸ್ ಠಾಣೆಗಳ ಮೇಲೆ ದಾಳಿ ಮಾಡಿರುವುದು ಹೇಯ ಕೃತ್ಯ. ಅಂತಹ ನೀಚರು ಈ ಭೂಮಿಯ ಮೇಲೆ ಬದುಕುವುದಕ್ಕೆ ಅರ್ಹರಲ್ಲ. ಈ ಒಂದು ಘಟನೆಯಿಂದ ಆದ ಹಾನಿಗಳನ್ನು ಹಾಗೂ ನಷ್ಟಗಳನ್ನು, ಘಟನೆಗೆ ಪ್ರಚೋದನೆ ನೀಡಿದ ಮತ್ತು ಈ ಘಟನೆಯಲ್ಲಿ ಭಾಗಿಯಾದವರಿಂದಲೇ ಬರಿಸುವ ಕೆಲಸ ವನ್ನು ಪೋಲೀಸ್ ಇಲಾಖೆ ಮತ್ತು ಕಾನೂನಿನ ಮೂಲಕ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಗಲಭೆಯನ್ನು ಹತೋಟಿಗೆ ತಂದು ಕಾನೂನು ಸುವ್ಯವಸ್ಥೆ ಕಾಪಾಡಿದ ರಾಜ್ಯ ಪೊಲೀಸ್ ಇಲಾಖೆ ಮತ್ತು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












