ಮಾ:23 ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮಿಜಿ ಪುಣ್ಯತಿಥಿ ಆರಾಧನಾ ಮಹೋತ್ಸವ

ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದ ಶಾಖಾ ಮಠದಲ್ಲಿ ಮಠದ ಗುರು ಪರಂಪರೆಯ ದ್ವಿತೀಯ ಗುರುಗಳಾದ ಶ್ರೀಮದ್ ಕೇಶವೇಂದ್ರ ತೀರ್ಥ ಸ್ವಾಮೀಜಿಯವರ ೩೪೯ನೇ ಪುಣ್ಯತಿಥಿ ಆರಾಧನಾ ಮಹೋತ್ಸವ ಮಾರ್ಚ್ ೨೩ ಶನಿವಾರದಂದು ನಡೆಯಲಿದೆ.

ಅಂದು ಬೆಳಿಗ್ಗೆ ಗಣಪತಿ ಪುಣ್ಯಾಹ, ದೇವತಾ ಅನುಷ್ಠಾನ ಹವನ, ನಂತರ ಶ್ರೀ ದೇವರಿಗೆ ಹಾಗೂ ಗುರುಗಳ ವೃಂದಾವನದಲ್ಲಿ ಪಂಚಾಮೃತ ಅಭೀಷೇಕ, ಕಲಶಾಭಿಷೇಕ, ಊರ ಪರವೂರ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಮಧ್ಯಾಹ್ನ ಮಹಾ ಮಂಗಳಾರತಿ ಹಾಗೂ ಸಂತರ್ಪಣೆ ನಡೆಯಲಿದೆ. ರಾತ್ರಿ ಗುರುಗುಣಗಾನ ವಿಶೇಷ ವಸಂತ ಪೂಜೆ ಜರುಗಲಿದೆ.