ಕಾರ್ಕಳ: ಸ್ವಸ್ಥ ಸದೃಢ ಆರೋಗ್ಯವೇ ನಮ್ಮ ಆಸ್ತಿ. ಉತ್ತಮ ಗುಣಮಟ್ಟದ ಪೋಷಕಾಂಶಗಳ ಪೌಷ್ಟಿಕಾಹಾರ ಸೇವಿಸುವುದು ನಮ್ಮ ಆರೋಗ್ಯ ಕಾಪಾಡಲು ಸಹಕಾರಿ ಎಂದು ಕಾರ್ಕಳ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ. ಭಾಸ್ಕರ್ ಎಂದು ತಿಳಿಸಿದರು.
ಕೆರುವಾಶೆಯ ಬಂಗ್ಲೆಗುಡ್ಡೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ದಲ್ಲಿ ಭಾಗವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಡಾ| ಹರಿಪ್ರಕಾಶ್ ಮಾತನಾಡಿ, ಸಾವಯವ ಕೃಷಿ ಯಿಂದ ಬೆಳೆದ ತರಕಾರಿ ಬೆಳೆಗಳು ನಮ್ಮ ದೇಹವನ್ನು ರೋಗರುಜಿನಗಳಿಂದ ಮುಕ್ತ ಗೊಳಿಸುತ್ತದೆ ಎಂದರು.
ಕೆರುವಾಶೆ ಗ್ರಾ.ಪಂ ಅಧ್ಯಕ್ಷೆ ಪ್ರಮೀಳ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಛಾಯಗ್ರಾಹಕ ಹಾಗು ಮಾಜಿ ಜೆಸಿಐ ಅಧ್ಯಕ್ಷ ಶರತ್ ಭಟ್, ಗ್ರಾ.ಪಂ ಸದಸ್ಯ ಸುನೀಲ್ ಶೆಟ್ಟಿ, ಸದಾನಂದ ಸಾಲ್ಯಾನ್, ಭೋಜ ಪೂಜಾರಿ, ಒಕ್ಕೂಟದ ಅಧ್ಯಕ್ಷ ರಾಮ ಸೇರ್ವೆಗಾರ್ ,ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಅಶೋಕ್ ಮೊಯಿಲಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ್ ನಾಯಕ್ ಮುಡಾಯಿಬೆಟ್ಟು ,ಸುರೇಂದ್ರ ನಾಯಕ್, ಶಾಲ ವಜ್ರಮಹೋತ್ಸವ ಸಮಿತಿ ಯ ಅಧ್ಯಕ್ಷ ಶೇಖರ್ ಶೆಟ್ಟಿ ಭಟ್ಯಾರು ಮೊದಲಾದವರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕ ಸಂಜಿವ ದೇವಾಡಿಗ ಕಾರ್ಯಕ್ರಮ ಸ್ವಾಗತಿಸಿದರು.