ಕೇರಳ: ನೈರುತ್ಯ ಮುಂಗಾರು ಜೂನ್ ನಾಲ್ಕರಿಂದ ಪ್ರವೇಶ

ಈ ಬಾರಿ ನೈರುತ್ಯ ಮುಂಗಾರು ಕೇರಳ ರಾಜ್ಯವನ್ನು ಜೂನ್ ನಾಲ್ಕರಂದು ಪ್ರವೇಶಿಸಲಿದೆ ಎಂದು ಕೇಂದ್ರ ಹವಮಾನ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ಬಾರಿ ಮೇ 29 ರಂದು ನೈರುತ್ಯ ಮುಂಗಾರು ಕೇರಳ ರಾಜ್ಯವನ್ನು ಪ್ರವೇಶಿಸಿತ್ತು. ಈ ಬಾರಿ ನಾಲ್ಕು ದಿನ ತಡವಾಗಿ ಪ್ರವೇಶಿಸಲಿದೆ ಎಂದು ಹೇಳಲಾಗುತ್ತಿದೆ. ಕೊಡಗಿನಲ್ಲಿ ಮೇ ಮೊದಲ ವಾರದ ಕೊನೆಯಿಂದ ಮಳೆ ಆರಂಭವಾಗುವ ಲಕ್ಷಣಗಳಿವೆ.