ಇಡುಕ್ಕಿ ಭೂಕುಸಿತ: ಮೃತರ ಸಂಖ್ಯೆ 61 ಏರಿಕೆ

ಕೇರಳ (ಇಡುಕ್ಕಿ): ಇಲ್ಲಿನ ಪೆಟ್ಟಿಮುಡಿ ಎಂಬಲ್ಲಿ ಆ.7ರಂದು ಸಂಭವಿಸಿದ್ದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಮೂರು ಶವಗಳು ಪತ್ತೆಯಾಗಿದ್ದು, ಇನ್ನೂ 9 ಜನರು ನಾಪತ್ತೆಯಾಗಿದ್ದಾರೆ.
ಆರು ವರ್ಷದ ಬಾಲಕನ ಶವ ಹಾಗೂ 57 ವರ್ಷದ ವ್ಯಕ್ತಿಯೊಬ್ಬರ ಶವವನ್ನು ಗುರುತಿಸಲಾಗಿದ್ದು, ಮತ್ತೊಂದು ಶವದ ಗುರುತು ಇನ್ನಷ್ಟೇ ಸಿಗಬೇಕಿದೆ.
ಭೂಕುಸಿತದಲ್ಲಿ 20 ಮನೆಗಳು ಸಂಪೂರ್ಣವಾಗಿ ನಾಶವಾಗಿದ್ದವು. ಘಟನೆಯಲ್ಲಿ 12 ಜನರನ್ನು ರಕ್ಷಿಸಲಾಗಿದೆ.   ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಪೊಲೀಸ್‌ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.