ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಕಾರ್ಕಳದ ಶ್ರೀ ಲಕ್ಷ್ಮೀ ಪ್ರಮೋದ್ ನಾಯಕ್ ಆಯ್ಕೆ

ಕಾರ್ಕಳ: ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2019-20ನೇ ಸಾಲಿನ ಕೆಳದಿ ಚೆನ್ನಮ್ಮಪ್ರಶಸ್ತಿಗೆ ಕಾರ್ಕಳದ ಶ್ರೀಲಕ್ಷ್ಮೀ ಪ್ರಮೋದ್ ನಾಯಕ್ ಅವರು ಆಯ್ಕೆಯಾಗಿದ್ದಾರೆ.
ಅಸಾಧಾರಣ ಸಾಧನೆ ಮಾಡಿರುವ ಮಕ್ಕಳಿಗೆ ನೀಡುವ ಈ ಪ್ರಶಸ್ತಿಯನ್ನು ಶ್ರೀಲಕ್ಷ್ಮೀ ‘ತಾರ್ಕಿಕ ಸಾಧನೆಗಳ’ ವಿಭಾಗದಲ್ಲಿ ಪಡೆದಿದ್ದಾಳೆ. ಪ್ರಶಸ್ತಿಯು 10 ಸಾವಿರ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಶ್ರೀಲಕ್ಷ್ಮೀ ಕಾರ್ಕಳ ಜ್ಞಾನಸುಧಾ ಕಾಲೇಜಿನ ವಿದ್ಯಾರ್ಥಿನಿ. ಕಾರ್ಕಳದ ಉಪನ್ಯಾಸಕ ಪ್ರಮೋದ್ ನಾಯಕ್ ಹಾಗೂ ಜಯಶ್ರೀ ದಂಪತಿಗಳ ಸುಪುತ್ರಿ.