ನಮ್ಮ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟರೆ  ಹೃದಯವನ್ನು ಸೇಫಾಗಿಡಬಹುದು!

1. ಧೂಮಪಾನ ಮತ್ತು ಇ-ಸಿಗರೇಟ್ ಅನ್ನು ತ್ಯಜಿಸಿ

ಧೂಮಪಾನ ಮಾಡುವವರಲ್ಲಿ ಹೃದಯರೋಗದ ಅಪಾಯ ಹೆಚ್ಚು. ತಂಬಾಕಿನಲ್ಲಿರುವ ರಾಸಾಯನಿಕಗಳು ರಕ್ತನಾಳಗಳಲ್ಲಿ ಪ್ಲೇಕ್‌ಗಳನ್ನು ರಚಿಸಿ ರಕ್ತದ ಹರಿವನ್ನು ಕಡಿಮೆ ಮಾಡುತ್ತವೆ. ಇದರಿಂದ: ಹೃದಯಾಘಾತವಾಗುವ ಸಾಧ್ಯತೆ ಹೆಚ್ಚುತ್ತದೆ. ಪಾರ್ಶ್ವವಾಯು (Stroke) ಸಂಭವಿಸಬಹುದು

ಇತ್ತೀಚೆಗೆ ಹಲವರು ಇ-ಸಿಗರೇಟ್ ಅಥವಾ ವೇಪಿಂಗ್ ಸುರಕ್ಷಿತ ಎಂದು ಭಾವಿಸುತ್ತಾರೆ. ಆದರೆ ಅವುಗಳಲ್ಲೂ ನಿಕೋಟಿನ್ ಮತ್ತು ಹಾನಿಕಾರಕ ವಾಯುಗಳು ಇವೆ. ಇವು ಕೂಡ ರಕ್ತನಾಳಗಳಿಗೆ ಹಾನಿ ಉಂಟುಮಾಡುತ್ತವೆ. WHO ಪ್ರಕಾರ, ಹೃದಯ ಸಂಬಂಧಿತ ಸಾವುಗಳಲ್ಲಿ ಸುಮಾರು 20%  ತಂಬಾಕೇ ಕಾರಣ.

2. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಿ

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಹೆಚ್ಚಾಗಿದ್ದರೆ ಮತ್ತು ಉತ್ತಮ ಕೊಲೆಸ್ಟ್ರಾಲ್ (HDL) ಕಡಿಮೆಯಾದರೆ, ರಕ್ತನಾಳಗಳಲ್ಲಿ ಕೊಬ್ಬಿನ ಪದರಗಳು ಜಮೆಯಾಗುತ್ತವೆ. ಇದರಿಂದ ರಕ್ತದ ಹರಿವು ಕಡಿಮೆಯಾಗುತ್ತದೆ ಮತ್ತು ಹೃದಯ ರೋಗದ ಅಪಾಯ ಹೆಚ್ಚುತ್ತದೆ.

ಮುಖ್ಯವಾಗಿ ತಿಳಿಯಬೇಕಾದುದು:

ಕೊಲೆಸ್ಟ್ರಾಲ್ ಹೆಚ್ಚಾದರೂ ಯಾವುದೇ ಸ್ಪಷ್ಟ ಲಕ್ಷಣಗಳು ಗೋಚರಿಸುವುದಿಲ್ಲ. ಆದ್ದರಿಂದ ಗಾಗಿ ಪರೀಕ್ಷೆ ನಡೆಸುವುದು ಅತ್ಯಗತ್ಯ

ಕೊಲೆಸ್ಟ್ರಾಲ್ ನಿಯಂತ್ರಿಸಲು:

ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ತಿನ್ನಿ, ಹೆಚ್ಚು ಎಣ್ಣೆ, ಜಂಕ್ ಫುಡ್, ಫಾಸ್ಟ್ ಫುಡ್ ಕಡಿಮೆ ಮಾಡಿ, ಪ್ರತಿದಿನ ಕನಿಷ್ಠ 30 ನಿಮಿಷ ನಡಿಗೆ  ಅಥವಾ ವ್ಯಾಯಾಮ ಮಾಡಿ