ಕಾಪು: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ; ಪೋಕ್ಸೋ ಪ್ರಕರಣ ದಾಖಲು

ಕಾಪು: ಉತ್ತರ ಪ್ರದೇಶ ಮೂಲದ ಕಾರ್ಮಿಕನೋರ್ವ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ಎಸಗಿ ಆ ಬಳಿಕ ಪರಾರಿಯಾಗಿರುವ ಘಟನೆ ಕಾಪುವಿನಲ್ಲಿ ನಡೆದಿದೆ.ಕಾಪುವಿನ ಸೆಲೂನ್‌ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ಶಾರುಖ್‌ ಖಾನ್‌ ಆರೋಪಿತ.

ಆರೋಪಿ ಪತ್ನಿಯ ಜತೆಗೆ ಕಾಪುವಿನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ. ಈ ನಡುವೆ ಆರೋಪಿ ಶಾರೂಖ್‌, ತನಗೆ ಮತ್ತು ಪತ್ನಿಗೆ ಆಶ್ರಯ ನೀಡಿದ್ದ ಮಹಿಳೆಯ ಅಪ್ರಾಪ್ತ ವಯಸ್ಸಿನ ಮಗಳನ್ನು ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ್ದನು. ಈ ಬಗ್ಗೆ ಬಾಲಕಿಯೂ ಬಾಯಿ ಬಿಟ್ಟಿರಲಿಲ್ಲ. ಈ ನಡುವೆ ಬಾಲಕಿಯಲ್ಲಾದ ದೈಹಿಕ ಬದಲಾವಣೆಯನ್ನು ಕಂಡು ಆಕೆಯ ತಾಯಿ ವೈದ್ಯರಲ್ಲಿ ಪರೀಕ್ಷೆಗೆ ಕರೆದೊಯ್ದಾಗ ಅಲ್ಲಿ ಬಾಲಕಿ ಗರ್ಭೀಣಿಯಾಗಿರುವ ಮಾಹಿತಿ ದೊರಕಿದೆ.

ಪ್ರಕರಣ ಬೆಳಕಿಗೆ ಬರುತ್ತಲೇ ಮನೆಯವರು ಆರೋಪಿಗಾಗಿ ಹುಡುಕಾಟ ನಡೆಸಿದ್ದು ಆತ ತನ್ನ ಊರಿಗೆ ಮರಳಿ ಹೋಗಿರುವ ವಿಚಾರ ಬೆಳಕಿಗೆ ಬಂದಿದ್ದು ಮನೆಯವರು ಕಾಪು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.