ಉಡುಪಿ: ತಿಂಗಳ ಹಿಂದೆಯಷ್ಟೇ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಇಂದು ತಮ್ಮ ಮಗಳ ಜೊತೆ ಮತ್ತೆ ಕಾಪು ಹೊಸ ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದರು.
ಪುತ್ರಿ ವಂದಿತಾ ಮತ್ತು ಸ್ನೇಹಿತೆಯರೊಂದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಿ ಅಮ್ಮನ ಪ್ರಸಾದವನ್ನು ನೀಡಲಾಯಿತು.
ಈ ಕ್ಷೇತ್ರಕ್ಕೆ ಬಂದ್ರೆ ಏನೋ ಒಂಥರಾ ಮನಸ್ಸಿಗೆ ನೆಮ್ಮದಿ. ಹಾಗಾಗಿ ಮಗದೊಮ್ಮೆ ಭೇಟಿ ಕೊಟ್ಟೆ ಎಂದು ಅಶ್ವಿನಿ ಅವರು ಅಭಿಪ್ರಾಯವ್ಯಕ್ತಪಡಿಸಿದರು. ಈ ಸಂದರ್ಭ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.












