ಉಡುಪಿ: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ 5 ವರ್ಷಗಳ ಅವಧಿಗೆ ಕಾಪು ತಾಲೂಕು ಮಟ್ಟದ ಕೃಷಿಕ ಸಮಾಜದ ಚುನಾವಣೆಯನ್ನು, ಜುಲೈ 11 ರ ಶನಿವಾರ ದಂದು ರೈತ ಸಂಪರ್ಕ ಕೇಂದ್ರ, ಕಾಪು ತಾಲೂಕು ಇಲ್ಲಿ ಬೆಳಗ್ಗೆ 8 ರಿಂದ ಅಪರಾಹ್ನ 3.00 ಘಂಟೆಯ ವರೆಗೆ ನಿಗದಿಪಡಿಸಲಾಗಿದೆ.
ಸದರಿ ಚುನಾವಣೆಗೆ ನಾಮಪತ್ರ ಸಲ್ಲಿಸುವ ಉಮೇದುದಾರರಿಗೆ ಜೂನ್ 30 ರಿಂದ ಕೃಷಿ ಅಧಿಕಾರಿಯವರ ಕಚೇರಿ, ರೈತ ಸಂಪರ್ಕ ಕೇಂದ್ರ, ಕಾಪು ಇಲ್ಲಿ ನಾಮಪತ್ರ ವಿತರಿಸಲಾಗುವುದು.
ಆಕಾಂಕ್ಷಿಗಳು ಚುನಾವಣಾಧಿಕಾರಿಗಳಿಗೆ ಅರ್ಜಿ ಮೂಲಕ ರೂ. 250-00 ಗಳನ್ನು ಠೇವಣಿಯಾಗಿ ಪಾವತಿಸಿದ ಮೂಲ ರಶೀದಿ ಹಾಗೂ ಸಂಬಂಧಿಸಿದ ತಹಶೀಲ್ದಾರರಿಂದ ದೃಢೀಕೃತ ಪಹಣಿ ಪತ್ರಿಯೊಂದಿಗೆ ನಾಮಪತ್ರ ಸಲ್ಲಿಸಲು ಜುಲೈ 4 ರ ಬೆಳಗ್ಗೆ 11 ರಿಂದ ಸಂಜೆ 5 ವರೆಗೆ ಅವಕಾಶವಿರುತ್ತದೆ ಎಂದು ಕಾಪು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.















