ದೇಶದ ರಕ್ಷಣೆ, ಸುಭದ್ರತೆಗಾಗಿ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ

ಉಡುಪಿ: ಸೈನಿಕರಿಗೆ ಶುಭಕೋರಿ ದೇಶಾದ್ಯಂತ ದೇಗುಲಗಳಲ್ಲಿ ಪೂಜೆ ಹೋಮ ಹವನಗಳು ನಡೆಯುತ್ತಿವೆ. ದಂಡಿನ ಮಾರಿಯಮ್ಮ ಎಂದೆ ಪ್ರಖ್ಯಾತವಾಗಿರುವ, ಸೈನಿಕರ ರಕ್ಷಣೆಗೆ ಕಟಿಬದ್ಧವಾದ ಶಕ್ತಿ ದೇಗುಲ ಉಡುಪಿಯ ಕಾಪು ಮಾರಿಯಮ್ಮನಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು.

ಇತ್ತೀಚಿಗಷ್ಟೇ ಬ್ರಹ್ಮ ಕಲಾಶೋತ್ಸವದಿಂದ ಹೊಸ ಚೇತನ ಪಡೆದಿರುವ ದೇಗುಲದಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸೈನಿಕರು ಆರಾಧಿಸಿದ ತಾಯಿ ಎಂದೇ ಪ್ರತೀತಿ ಇರುವ ಕಾಪು ಮಾರಿಯಮ್ಮನ ಈ ಪೂಜೆ ದೇಶದ ರಕ್ಷಣೆ ಹಾಗೂ ಸುಭದ್ರತೆಗೆ ನಾಂದಿಯಾಗಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ.

Oplus_131072

ಕಾಪು ಎಂದರೆ ತುಳುವಿನಲ್ಲಿ ಸಲಹುವುದು ಎಂದರ್ಥ, ಕಾಪುವಿನ ಮಾರಿಯಮ್ಮ ಸೈನ್ಯವನ್ನು ಸಲಹಲಿ ದೇಶವನ್ನು ಕಾಪಾಡಲಿ ಎಂದು ವಿಶೇಷ ಪ್ರಾರ್ಥನೆಯೊಂದಿಗೆ ಪೂಜೆ ಸಲ್ಲಿಸಲಾಯಿತು.

Oplus_131072