ಉಡುಪಿ:ಕಾಪು ಮೇಘ ಇಂಜಿನಿಯರ್ ವಿರುದ್ಧ ಸ್ಥಳೀಯರ ಆಕ್ರೋಶ:ಪಾದೂರು ಐ ಎಸ್ ಪಿ ಆರ್ ಎಲ್ ಘಟಕದ ಎದುರು ಬೃಹತ್ ಪ್ರತಿಭಟನೆ

ಉಡುಪಿ:ಪ್ರತಿಭಟನಕಾರರ ಆರೋಪದಂತೆ ಮೇಘ ಇಂಜಿನಿಯರ್ ಸಂಸ್ಥೆಯು ಕಾಮಗಾರಿ ಪ್ರಾರಂಭಿಸುವ ಮೊದಲು ಸಂಬಂಧಪಟ್ಟ ವಿವಿಧ ಇಲಾಖೆಗಳ ಸಮರ್ಪಕ ಅನುಮತಿಗಳನ್ನು ಪಡೆಯದೆ ಕಾರ್ಯಾಚರಣೆ ಕೈಗೊಂಡಿದೆ. ಅಲ್ಲದೆ ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ನೀಡದೆ ಅವರನ್ನು ನಿರ್ಲಕ್ಷಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೋರಾಟ ಸಮತಿಯ ಸದಸ್ಯರು ತಿಳಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಶ್ರೀ ವಿನಯ್ ಕುಮಾರ್ ಸೊರಕೆ ಅವರು ಕಂಪನಿ ತಕ್ಷಣವೇ ಎಲ್ಲಾ ಕಾನೂನು ಬದ್ದ ಅನುಮತಿಯನ್ನು ಪಡೆಯಬೇಕು.ಸ್ಥಳೀಯರಿಗೆ ಉದ್ಯೋಗಾವಕಾಶವನ್ನು ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ. ಎಂಎ ಗಫೂರ್ ದಿವಾಕರ್ ಶೆಟ್ಟಿ ಜಿತೇಂದ್ರ ಫೇರ್ಡ್ತಾಡೋ, ಅಮಿತ್ ಮೂಳೂರು, ಸಂತೋಷ್ ಬೈರಂಪಳ್ಳಿ ಅನ್ಸರ್ ಅಹಮದ್, ಸುರೇಂದ್ರ ಜೈನ್ ಸೇರಿದಂತೆ ಹಲವು ನಾಯಕರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಹೋರಾಟ ಸಮಿತಿಯ ಕಾರ್ಯದರ್ಶಿ ಸರ್ಪುದ್ದೀನ್ ಶೇಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿ ಹೇರೂರು ವಿಲ್ಸನ್ ರಾಡ್ರಿಕ್ಸ್,ಶಾಂತಲತ ಶೆಟ್ಟಿ, ಹಸನಬ್ಬಶೇಕ್, ರತನ್ ಶೆಟ್ಟಿ ಮಹಮದ್ ಫಾರೂಕ್ ಅಜೀಜ್ ಹೆಜಮಾಡಿ ಸೇರಿದಂತೆ , ಅನೇಕ ಮುಖಂಡರು ಹಾಗೂ ನೂರಾರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಸ್ಥಳೀಯ ರಾಜಕೀಯ ಪಕ್ಷಗಳು ವಿವಿಧ ಸಂಘಟನೆಗಳು, ಹಾಗೂ ಕನ್ನಡ ಚಳುವಳಿ ಹೋರಾಟಗಾರರು ಪ್ರತಿಭಟನೆಗೆ ಸಾತ್ ನೀಡಿದ್ದು ಪಾದೂರಿನ ನ ಪರಿಸರ ಹಾಗೂ ಜನರ ಹಿತ ಶಕ್ತಿಯನ್ನು ಕಾಪಾಡುವಂತೆ ಸರ್ಕಾರ ಮತ್ತು ಕಂಪನಿಗೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಅಧ್ಯಕ್ಷರಾದ ಸದಾನಂದ ಪೂಜಾರಿ ಹೇರೂರು ವಿಲ್ಸನ್ ರೋಡ್ರಿಗಸ್,ಶಾಂತಲತ ಶೆಟ್ಟಿ, ಹಸನಬ್ಬ ಶೇಕ್,ರತನ್ ಶೆಟ್ಟಿ ಮಹಮದ್ ಫಾರೂಕು ಚಂದ್ರನಗರ , ಅಜೀಜ್ ಹೆಜಮಾಡಿ, ಅಶೋಕ್ ನಾಯಿರಿ, ಪ್ರಬೋದ್ ಚಂದ್ರ ಹೆಜಮಾಡಿ, ನವೀನ್ ಎನ್ ಶೆಟ್ಟಿ ರಮೀಜ್ ಹುಸೇನ್, ರಿಯಾಜ್ ಮುದರಂಗಡಿ, ಸಿಯಾಜ್ ಪಡುಬಿದ್ರಿ, ಅಮೀರ್ ಮೊಹಮ್ಮದ್, ಸೈಯದ್ ನಿಜಾರುದ್ದೀನ್ ಇಮ್ರಾನ್ ಮಜೂರ್, ಸಾದಿಕ್ ಕೆಪಿ, ಅನ್ವರ್ ಆಲಿ ಭಾಸ್ಕರ್ ಕುಮಾರ್ ವಿಜಯ್ ಧೀರಜ್, ನಾಗಭೂಷಣರಾವ್, ಸುಮನ್ ಬೋಲರ್, ಅಬ್ದುಲ್ ಸೂಪರ್ ಸ್ಟಾರ್, ಸುಚರಿತಾ, ಸವಿತಾ ಕುಂದರ್, ಎ ಆರ್ ಬಿ ಆರೋಗ್ಯ ಇಲಾಖೆ ಕಾಪು ತಾಲೂಕು ಸದಸ್ಯ ದಿವಾಕರ.ಬಿ. ಶೆಟ್ಟಿ,ಗ್ಯಾರಂಟಿ ಸಮಿತಿಯ ಸದಸ್ಯರಾದ ರಾಜೇಶ್ ಮೂಲ್ಯ,ಅಬ್ದುಲ್ ರೆಹಮಾನ್ ಚಂದ್ರನಗರ,ಎಲ್ಲೂರು ವಿಶ್ವೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಶಶಿಕಾಂತ ಆಚಾರ್ಯ,, ಬ್ಲಾಕ್ ಕಾಂಗ್ರೆಸ್ ಕಾಪು ಕಾರ್ಯ ಕರಿಣಿ ಸಮಿತಿಯ ಸದಸ್ಯ ಜಾನ್ಸನ್ ಕರ್ಕಡ ಕಳತ್ತೂರು,ಹಾಜಬಾ ಕರಂದಾಡಿ,ಸಂಶುದ್ದಿನ್ ಕರಂದಾಡಿ,ಆಲ್ವಿನ್ ಕುತ್ಯಾರು, ನ್ಯಾಯವಾದಿ ಭೂ ನ್ಯಾಯ ಮಂಡಳಿ ಸದಸ್ಯರಾದ ರೋಹನ್ ಕುಮಾರ್ ಕುತ್ಯಾರು, ಐರಿನ್ ತವರೋ ಪುಂಚಲ ಕಾಡು, ವನಿತಾ ಕಳತೂರು, ಗ್ಯಾರಂಟಿ ಸಮಿತಿ ಸದಸ್ಯರಾದ ಸವಿತಾ ಪಾದೂರು ಚಂದು ಶೆಟ್ಟಿಗಾರ್ ಕಳತ್ತೂರು, ಭಾರತಿ ಶೆಟ್ಟಿಗಾರ್, ಲಲಿತಾ ಆಚಾರ್ಯ ಶಾಂತಿಗುಡ್ಡೆ, ಗಿಲ್ಬರ್ಟ್ ತಾವ್ರು ಪೀಟರ್ ಫೆರ್ನಾಂಡಿಸ್ ಶಾಂತಿಗುಡ್ಡೆ ಮುಂತಾದವರು ಉಪಸ್ಥಿತರಿದ್ದರು.