ಉಡುಪಿ: ಕಾಪು ಸಮೀಪದ ಬಂಟಕಲ್ ಎಂಜಿನಿಯರಿಂಗ್ ಕಾಲೇಜ್ ಹತ್ತಿರ ಹೊಸದಾಗಿ ಕಾರ್ಯನಿರ್ವಹಿಸಲು ಸಿದ್ಧಗೊಂಡ “ಗ್ರಾನೈಟ್ ಎಂಪೋರಿಯಂ” ಘಟಕದ ಉದ್ಘಾಟನಾ ಸಮಾರಂಭವು ಫೆ. 22 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಈ ಘಟಕವು ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪೂರೈಸುವ ಪ್ರೀಮಿಯಂ ಮಾರ್ಬಲ್ ಮತ್ತು ಗ್ರಾನೈಟ್ ಪ್ರೊಸೆಸಿಂಗ್ ಯುನಿಟ್ ಆಗಿದೆ.
ಸಮಾರಂಭದಲ್ಲಿ ಕಾಪು ಕ್ಷೇತ್ರದ ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಆರ್‌ಜಿ ಗ್ರೂಪ್ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಘಟಕವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ಶಾಸಕರಾದ ಯಶಪಾಲ್ ಸುವರ್ಣ, ಕಾರವಾರ ಶಾಸಕರಾದ ಸತೀಶ್ ಕೃಷ್ಣ ಸೈಲ್, ಮಾಜಿ ಸಚಿವರಾದ ವಿನಯ್ ಕುಮಾರ್ ಸೋರಕೆ, ಕಾಪು ಕ್ಷೇತ್ರದ ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಹಾಗೂ ‘ಸಿಐಡಿ’ ಖ್ಯಾತಿಯ ನಟ ಶ್ರೀ ದಯಾನಂದ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ಹೊಸ ಉದ್ಯಮವು ಗ್ರಾನೈಟ್ ಮತ್ತು ಮಾರ್ಬಲ್ ಸ್ಲ್ಯಾಬ್‌ಗಳು, ಟೈಲ್ಸ್, ಫರ್ನಿಚರ್ ಹಾಗೂ ಇಂಟೀರಿಯರ್ ಡೆಕೋರೇಶನ್ ಉತ್ಪನ್ನಗಳನ್ನು ಹೊಲ್ಸೇಲ್ ಮತ್ತು ರಿಟೇಲ್ ಮಾರಾಟದ ಮೂಲಕ ಗ್ರಾಹಕರಿಗೆ ಒದಗಿಸಲಿದೆ ಎಂದು ಸಂಸ್ಥೆ ತಿಳಿಸಿದೆ.ಈ ಹೊಸ ಕೈಗಾರಿಕಾ ಪ್ರಯತ್ನವು ಸ್ಥಳೀಯ ಉದ್ಯೋಗಾವಕಾಶಗಳ ಹೆಚ್ಚಳಕ್ಕೂ ಸಹಾಯಕವಾಗಲಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವಂತೆ ಅಶೋಕ್ ಶೆಟ್ಟಿ ಮಣಿಯೂರ್ ತಿಳಿಸಿದ್ದಾರೆ.
















