ಉಡುಪಿ:ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಗೊಬ್ಬುದ ಕಲಾ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಇದರಲ್ಲಿ ವಿದ್ಯಾರ್ಥಿಗಳಿಗೆ ಕೇಸರಿನ ಒಂದಷ್ಟು ಕ್ರೀಡಾಕೂಟಗಳ ಜೊತೆಗೆ ನೇಜಿ ನೀಡುವ ಕಾರ್ಯಕ್ರಮ ನಡೆದಿತ್ತು. ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಮುಂಭಾಗದ ಗದ್ದೆಯಲ್ಲಿ ವಿದ್ಯಾರ್ಥಿಗಳು ಕೆಸರಿನೊಂದಿಗೆ ಆಟವಾಡಿ ತದನಂತರ ಅದೇ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಗದ್ದೆಗೆ ಹಾಲು ಹಾಕುವುದರ ಮೂಲಕ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊಫೆಸರ್ ಹರಿಪ್ರಸಾದ್ ಉದ್ಘಾಟಿಸಿದರು.
ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು , ಶಿಕ್ಷಕರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಕನ್ನಡ ಪ್ರಾಧ್ಯಾಪಕ ಧೀರಜ್ ಬೆಳ್ಳಾರೆ ನಿರ್ವಹಿಸಿದರು ವಿದ್ಯಾರ್ಥಿಗಳಿಗೆ ರೈತನ ಬದುಕಿನ ಕಷ್ಟ ಮತ್ತು ಬತ್ತ ಬೆಳೆಯುವ ವಿಧಾನವನ್ನು ವಿವರಿಸಲಾಯಿತು .ತ್ರಿಶಾ ಸಮೂಹ ಸಂಸ್ಥೆಗಳ ಈ ವಿಭಿನ್ನವಾದ ಕಾರ್ಯಕ್ರಮ ವಿದ್ಯಾರ್ಥಿಗಳ ಹೆತ್ತವರ ಮತ್ತು ಊರವರ ಪ್ರಶಂಸೆಗೆ ಕಾರಣವಾಯಿತು.












