ಉಡುಪಿ: ಲೆಕ್ಕ ಪರಿಶೋಧಕ ಪರೀಕ್ಷಾರ್ಥಿಗಳ ಉತ್ತಮ ಫಲಿತಾಂಶದೊಂದಿಗೆ ಉಡುಪಿ ಮತ್ತು ಮಂಗಳೂರಿನ ‘ತ್ರಿಶಾ ಕ್ಲಾಸಸ್’ವತಿಯಿಂದ ಸಿಎ ಇಂಟರ್ಮೀಡಿಯೆಟ್ ತರಬೇತಿಯ ಉಚಿತ ಮಾಹಿತಿ ಶಿಬಿರವು ನಾಳೆ (ಸೆ. 26) ಬೆಳಿಗ್ಗೆ 10ಕ್ಕೆ ಕಟಪಾಡಿಯ ತ್ರಿಶಾವಿದ್ಯಾ ಕಾಲೇಜಿನ ಅಬ್ದುಲ್ ಕಲಾಂ ಆಡಿಟೋರಿಯಂನಲ್ಲಿ ನಡೆಯಲಿದೆ.
ನುರಿತ ಲೆಕ್ಕ ಪರಿಶೋಧಕರು ಮತ್ತು ಅನುಭವಿ ಶಿಕ್ಷಕರ ಸೂಕ್ತ ಮಾರ್ಗದರ್ಶನದೊಂದಿಗೆ ಸಿಎ ಇಂಟರ್ಮೀಡಿಯೆಟ್ ಬಗ್ಗೆ ಮಾಹಿತಿ ನೀಡಲಿದ್ದು ಆಸಕ್ತರು ಈ ಮಾಹಿತಿ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.