ಕಟಪಾಡಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ವರ್ಷಾವಧಿ ಜಾತ್ರಾ ಮಹೋತ್ಸವವು ಫೆ.9 ರಂದು ಆರಂಭಗೊಂಡಿದ್ದು, ಫೆ.17 ರ ವರೆಗೆ ನಡೆಯಲಿದೆ.
ಫೆ.15 ರಂದು ಮಹಾಗಣಪತಿ ಹೋಮ, ಶ್ರೀ ವಿಶ್ವನಾಥ ದೇವರಿಗೆ ಶತ ಸೀಯಾಳಾಭಿಷೇಕ, ಮಹಾಪೂಜೆ, ಭೂತಬಲಿ, ಉತ್ಸವ, ರಾತ್ರಿ ರಥೋತ್ಸವ, ಕೆರೆದೀಪೋತ್ಸವ, ಕಟ್ಟೆಪೂಜೆ ಹಾಗೂ ಫೆ.16 ರಂದು ಮಹಾಗಣಪತಿ ಹೋಮ, ತುಲಾಭಾರ ಸೇವೆ, ಮಹಾಪೂಜೆ, ಹಗಲು ಉತ್ಸವ – ರಥೋತ್ಸವ, ಮಹಾ ಅನ್ನಸಂತರ್ಪಣೆ, ಪಲ್ಲಕ್ಕಿ ಉತ್ಸವ, ಪೇಟೆ ಸವಾರಿ, ಮೃಗಬೇಟೆ, ಶಯನೋತ್ಸವ, ಕವಾಟ ಬಂಧನ ನಡೆಯಲಿದೆ.
ಫೆ. 17ರಂದು ಕವಾಟೋದ್ಘಾಟನೆ, ಮಹಾಗಣಪತಿ ಹೋಮ, ಅವಭೃತ, ಧ್ವಜ ಅವರೋಹಣ, ಕಲಶಾಭಿಷೇಕ, ಮಹಾಪೂಜೆ, ಗುರುಪೂಜೆ, ಕಲ್ಕುಡ ಕೋಲದ ಚಪ್ಪರ ಮುಹೂರ್ತ ಹಾಗೂ ಭಂಡಾರ ಇಳಿಯುವುದು, ರಾತ್ರಿ ಕಲ್ಕುಡ ಕೋಲ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.