ಲಂಡನ್: ಇಲ್ಲಿನ ಓವಲ್ನಲ್ಲಿ ನಡೆದ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ ಒನ್ ಕ್ರಿಕೆಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ಸರ್ರೆ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸಿದರು. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ ಡಿವಿಷನ್ ಒನ್ ಕ್ರಿಕೆಟ್ನಲ್ಲಿ ಕರುಣ್ ನಾಯರ್ ಶತಕದಾಟವಾಡಿದರು.
ಕ್ರೀಸ್ಗಿಳಿದ ನಾಯರ್, ಟಾಮ್ ಟೇಲರ್ ಅವರೊಂದಿಗೆ 114 ರನ್ಗಳ ಆಕರ್ಷಕ ಜೊತೆಯಾಟವಾಡಿ ತಂಡದ ಮೊತ್ತ ಹೆಚ್ಚಿಸತೊಡಗಿದರು. 66 ರನ್ಗಳಿಸಿದ ಟಾಮ್ ಓವರ್ಟನ್ ಅವರು ಟೇಲರ್ಎಸೆತದಲ್ಲಿ ವಿಕೆಟ್ ಒಪ್ಪಿಸಿ ಹೊರನಡೆದರು. ಸಮಯೋಚಿತ ಆಟ ಮುಂದುವರೆಸಿದ ನಾಯರ್ ಸೊಗಸಾದ ಶತಕ ಪೂರೈಸುವ ಮೂಲಕ ತಂಡದ ಸ್ಕೋರ್ ಅನ್ನು 351ಕ್ಕೆ ಕೊಂಡೊಯ್ದರು. ಆ ಬಳಿಕ ಮಳೆಯಿಂದಾಗಿ ಎರಡನೇ ದಿನದಾಟ ನಿಲ್ಲಿಸಲಾಯಿತು. ಬುಧವಾರ ಎರಡನೇ ದಿನದಾಟವನ್ನು 51 ರನ್ಗಳಿಂದ ಪುನರಾರಂಭಿಸಿದ ನಾಯರ್ 238 ಎಸೆತಗಳಲ್ಲಿ 22 ಬೌಂಡರಿ ಮತ್ತು ಎರಡು ಸಿಕ್ಸರ್ಸಮೇತ 144 ರನ್ ಕಲೆಹಾಕಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಯರ್ ಬ್ಯಾಟಿಂಗ್ಗೆ ಆಗಮಿಸಿದ ವೇಳೆ ನಾರ್ಥಾಂಪ್ಟನ್ಶೈರ್ 151 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು
ಇಂಗ್ಲೆಂಡ್ ವಿರುದ್ಧ ನಾಯರ್ ‘ಟ್ರಿಪಲ್ ಸೆಂಚ್ಯುರಿ’: ಕರುಣ್ ನಾಯರ್ ಭಾರತ ಪರ ಈವರೆಗೆ ಆರು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. 2016ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ತ್ರಿಶತಕ (303*) ಸಿಡಿಸಿ ಅಬ್ಬರಿಸಿದ್ದರು. ತಮ್ಮ ಕೊನೆಯ ಟೆಸ್ಟ್ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದರು. ನಂತರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಲ್ಲಿ ಅವಕಾಶ ಪಡೆಯವಲ್ಲಿ ವಿಫಲರಾದರು. ಎರಡು ಏಕದಿನ ಪಂದ್ಯವಾಡಿರುವ ನಾಯರ್ ಗರಿಷ್ಠ ಸ್ಕೋರ್ 39 ರನ್ ಆಗಿದೆ. 76 ಐಪಿಎಲ್ ಪಂದ್ಯಗಳನ್ನು ಆಡಿರುವ ನಾಯರ್ 1,496 ರನ್ಗಳನ್ನು ಕಲೆಹಾಕಿದ್ದಾರೆ. 83 ಇವರ ಹೈಸ್ಕೋರ್ ಆಗಿದೆ. ಇತ್ತೀಚೆಗೆ ನಡೆದ ಮಹಾರಾಜ ಟ್ರೋಫಿಯಲ್ಲೂ ನಾಯರ್ ಉತ್ತಮ ಪ್ರದರ್ಶನ ತೋರುವ ಮೂಲಕ ತಾವು ಫಾರ್ಮ್ಗೆ ಕಮ್ಬ್ಯಾಕ್ ಮಾಡಿರುವುದಾಗಿ ತೋರಿಸಿದ್ದಾರೆ.
ಸದ್ಯ ತಂಡ 9 ವಿಕೆಟ್ ನಷ್ಟಕ್ಕೆ 351 ರನ್ ಪೇರಿಸಿದೆ. ಕಳೆದ ವಾರ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ವಾರ್ವಿಕ್ಷೈರ್ ವಿರುದ್ಧ ಪಂದ್ಯದಲ್ಲಿ 31ರ ಹರೆಯದ ನಾಯರ್ ಅರ್ಧಶತಕ ಸಿಡಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ಒಟ್ಟು 78 ರನ್ಗಳನ್ನು ಅವರು ಕಲೆ ಹಾಕಿದ್ದರು