ಉಡುಪಿ: ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದು,ತೆರೆಮರೆಯ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ ಹಳೆ ಸಂಪ್ರದಾಯ ಕೈಬಿಟ್ಟು, ಸಮಿತಿ ಮತ್ತು ಸಾರ್ವಜನಿಕರ ಆಶಯದ ಮೇರೆಗೆ ಗ್ರಾಮೀಣ, ನಗರ ಭಾಗದಲ್ಲಿ ತೆರೆಮರೆಯಲ್ಲಿ ಅನೇಕ ಸಾಧಕರಿದ್ದು, ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯವನ್ನು ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರಿನಲ್ಲೆ ಇರುವ 4 ಜಂಟಿ ನಿರ್ದೇಶಕರ ಹುದ್ದೆಯನ್ನು 4 ಕಂದಾಯ ವಿಭಾಗವಾಗಿ ರಚಿಸಿ ಅವರಿಗೆ ಜವಬ್ಧಾರಿ ಹಂಚಿಕೆ ಮಾಡಲಾಗುವುದು ಎಂದರು.
ನಮ್ಮ ನಾಡಗೀತೆ ಅವಧಿ ಕಡಿತಗೊಳಿಸುವುದು ನನಗೆ ಇಷ್ಟವಿಲ್ಲ. ಆದರೆ ಸಂಗೀತ ಉದ್ದವಾಗಿ ಸಮಯ ಹೆಚ್ಚಿಸಿದೆ. ಈ ಬಗ್ಗೆ ಹಿರಿಯ ಸಾಹಿತಿ, ಕಲಾವಿದರ ಜತೆ ಚರ್ಚಿಸಿ, ಸೂಕ್ತ ನಿರ್ಧಾರಕ್ಕೆ ಬರಲಾಗುವುದು. ಜತೆಗೆ ಹಿರಿಯ ಕವಿ ಚೆನ್ನವೀರ ಕಣವಿ ಅವರು ಶಿಫಾರಸ್ಸನ್ನು ಪರಿಗಣಿಸಲಾಗುವುದು ಎಂದು ಸುನಿಲ್ ತಿಳಿಸಿದ್ದಾರೆ.